ನಗರಕ್ಕೆ ಹೆಚ್ಚುವರಿ ಪೊಲೀಸ್ ಠಾಣೆ ಮಂಜೂರಾತಿ ಅಗತ್ಯ

ನಗರಕ್ಕೆ ಹೆಚ್ಚುವರಿ ಪೊಲೀಸ್ ಠಾಣೆ ಮಂಜೂರಾತಿ ಅಗತ್ಯ  City needs approval for additional police station

ರಾಣೆಬೆನ್ನೂರು 30:  ನಗರವು ದಿನದಿಂದ  ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಇಲ್ಲಿನ  ನಾಗರಿಕರ ಸುರಕ್ಷತೆಗೆ ಈ ನಗರಕ್ಕೆ ಇನ್ನೊಂದು ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯ ಮತ್ತು  ಅವಶ್ಯಕತೆ ಇದ್ದು. ಈ ಕೂಡಲೇ ವಾಣಿಜ್ಯ ನಗರಕ್ಕೆ ಹೆಚ್ಚುವರಿಯಾಗಿ ಮತ್ತೊಂದು ಪೊಲೀಸ್ ಠಾಣೆ ಮಂಜೂರಾತಿ ಮಾಡಿಕೊಡುವಂತೆ ರೈತ ಪರ ಸಂಘಟನೆ ಅಧ್ಯಕ್ಷ ರವೀಂದ್ರಗೌಡ ಪಾಟೀಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.  

ಶನಿವಾರ ನಗರದ ಠಾಣೆಗೆ ಆಗಮಿಸಿದ ಐಜಿಪಿ ಡಾ.ಬಿ.ಆರ್‌. ರವಿ ಕಾಂತೇಗೌಡ ಅವರನ್ನು ಭೇಟಿ ಮಾಡಿದ ವಿವಿಧ ಕನ್ನಡಪರ ಸಂಘ, ಸಂಸ್ಥೆಗಳ ಮುಖಂಡರು, ಕಾರ್ಮಿಕರು ವರ್ತಕರು ಉದ್ಯಮಿಗಳು ವಾಣಿಜ್ಯ ನಗರಕ್ಕೆ ಬೇಡಿಕೆಯ ಅಗತ್ಯ ಮತ್ತು ಅವಶ್ಯಕತೆ ಕುರಿತು ಮನವರಿಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.  

ನಾಗರಿಕರ   ಮನವಿ ಸ್ವೀಕರಿಸಿ ಮಾತನಾಡಿದ, ಡಾ.ಬಿ. ಆರ್‌. ರವಿ ಕಾಂತೇಗೌಡ ಅವರು, ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ ಅವರ ಜೊತೆಗೆ ಹಿರಿಯ ಅಧಿಕಾರಿಗಳ ತಂಡವು ಅತ್ಯುತ್ತಮ ಸೇವೆ ಸಲ್ಲಿಸುತ್ತಲಿದೆ. ಕೊಲೆ ಸುಲಿಗೆ ರಾಬರಿ ಮತ್ತೆ ಇತರೆ ಪ್ರಕರಣಗಳು ಅತ್ಯಂತ ಶೀಘ್ರವಾಗಿ ಭೇದಿಸುವಲ್ಲಿ ಯಶಸ್ವಿ ಕಂಡಿದ್ದಾರೆ.  ಹಾವೇರಿ ಜಿಲ್ಲೆಯಲ್ಲಿಯೇ ರಾಣೆಬೆನ್ನೂರು ನಗರ ಮತ್ತು ತಾಲೂಕು  ಬಹು ದೊಡ್ಡದೆಂದು ತಾವು ಸಹ ಗಮನಿಸಿದ್ದೇವೆ.  ಬೇಡಿಕೆಗೆ ಅನುಗುಣವಾಗಿ ಆದಷ್ಟು ಬೇಗನೆ  ಈ ಹೆಚ್ಚುವರಿ ಪೊಲೀಸ್ ಠಾಣೆಯ ಅವಶ್ಯಕತೆ ಕುರಿತು ತಾವು ಚರ್ಚಿಸಿ, ಇಲಾಖೆಯಿಂದ ಮತ್ತೊಂದು ಪೋಲಿಸ್ ಠಾಣೆಗೆ ಮಂಜೂರಾತಿ ನೀಡುವುದರ ಮೂಲಕ ಬೇಡಿಕೆ  ಈಡೇರಿಸುವುದಾಗಿ ಅವರು,ಭರವಸೆ ನೀಡಿದರು.  

  ಮನವಿ ಸಲ್ಲಿಸಿ ಮಾತನಾಡಿದ. ರೈತಪರ ಸಂಘಟನೆಯ ಅಧ್ಯಕ್ಷ ರವೀಂದ್ರಗೌಡ ಪಾಟೀಲ್ ಅವರು, ಕಳೆದ 15 ವರ್ಷಗಳ ಹಿಂದೆ ಮುಂದಾಲೋಚನೆಯ ಪ್ರಯುಕ್ತ ನಗರದಲ್ಲಿ ಹೆಚ್ಚುವರಿ ಠಾಣೆಗೆ ಬೇಡಿಕೆ ಸಲ್ಲಿಸಲಾಗಿತ್ತು. ತನ್ನ ವಾಣಿಜ್ಯ ವ್ಯವಹಾರ, ಉತ್ಪಾದನೆ, ಬೀಜೋತ್ಪಾದನೆಯ ಮೂಲಕ  ಓದ್ಯೋಗಿಕವಾಗಿಯು ಸಹ ದಿನದಿಂದ ದಿನಕ್ಕೆ  ಅತಿ ವೇಗದಲ್ಲಿ ಪ್ರಗತಿ ಕಾಣುತ್ತಿದೆ. ಕಾನೂನು ಸುರಕ್ಷತೆಯ ದೃಷ್ಟಿಯಿಂದ ಇಲ್ಲಿನ ಜನಸಂಖ್ಯೆ ಅನುಗುಣವಾಗಿ  ಮತ್ತೊಂದು ಪೊಲೀಸ್ ಠಾಣೆಯ ಅಗತ್ಯ, ಮತ್ತು ಅವಶ್ಯಕತೆ ಇದೆ ಈ ಕೂಡಲೇ ಸಾರ್ವಜನಿಕರ ಈ ಈಡೇರಿಸಬೇಕೆಂದು ಪಾಟೀಲ್ ಅವರು ಕೋರಿದರು.  ಇದೇ ಸಂದರ್ಭದಲ್ಲಿ ರೈತರು, ಉದ್ಯಮಿಗಳು, ಕಾರ್ಮಿಕರು, ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕರ್ತರು ರವಿ ಕಾಂತೇಗೌಡ ಅವರಿಗೆ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.  

  ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಆಟೋ ಚಾಲಕ ಮಾಲಕರ  ಒಕ್ಕೂಟದ ಅಧ್ಯಕ್ಷ ಜಗದೀಶ್ ಕೆರೋಡಿ, ಸುರೇಶ್ ಮಲ್ಲಾಪುರ, ವೀರೇಶ್ ಬಳ್ಳಾರಿ, ಎಲ್ಲಪ್ಪ ಚಿಕ್ಕಣ್ಣನವರ, ವೆಂಕಟೇಶ್ ಲಮಾಣಿ, ಶಂಕರ್ ದಮ್ಮಳ್ಳಿ, ಮೇ ಜಯಪ್ಪ ಚವಾಣ, ಪ್ರವೀಣ್ ಪೂಜಾರ, ಸೇರಿದಂತೆ ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.