ಅಂತರರಾಷ್ಟ್ರೀಯ

ತೈವಾನ್ ಸಮೀಪ ಚೀನಾ ಸೇನಾ ಕವಾಯತು

ತೈವಾನ್ ಸಮೀಪ ಚೀನಾ ಸೇನಾ ಕವಾಯತು

ಬೀಜಿಂಗ್, ಆಗಸ್ಟ್ 17: ಅಮೆರಿಕ ಮತ್ತು ತೈಪೆಯ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿ ತೈವಾನ್ ಸಮೀಪದ ಜಲ ಮತ್ತು ವಾಯುಪ್ರದೇಶದಲ್ಲಿ ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ ಪಿಎಲ್‌ಎ ಸೇನಾ ಕವಾಯತು ನಡೆಸುತ್ತಿದೆ ಎಂದು ಈಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರ ಶಿ ಯಿ ಮಂಗಳವಾರ ಹೇಳಿದ್ದಾರೆ. 

ಅಮೆರಿಕ ಹಾಗೂ ತೈವಾನ್ ಚೀನಾದ ಸಾರ್ವಭೌಮತೆಯನ್ನು ಉಲ್ಲಂಘಿಸಿ ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಗೆಡಹುವ ಪ್ರಚೋದನಕಾರಿ ಕ್ರಮಗಳಲ್ಲಿ ತೊಡಗಿರುವುದಾಗಿ ಚೀನಾದ ಅಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಆಗಸ್ಟ್ 17 ರಂದು, ಚೀನಾದ ಪಿಎಲ್‌ಎ ಈಸ್ಟರ್ನ್ ಥಿಯೇಟರ್ ಕಮಾಂಡ್ ಯುದ್ಧನೌಕೆಗಳು, ಜಲಾಂತರ್ಗಾಮಿ ವಿರೋಧಿ ವಿಮಾನಗಳು ಮತ್ತು ಯುದ್ಧ ವಿಮಾನಗಳನ್ನು ಜಂಟಿ ಮಿಲಿಟರಿ ಕವಾಯತಿಗಾಗಿ ನಿಯೋಜಿಸಲಾಯಿತು” ಎಂದು ವಕ್ತಾರರು ಹೇಳಿದ್ದಾರೆ.

ಪ್ರಸ್ತುತ ಜಲಸಂಧಿಯಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕವಾಯತು ನಡೆಸುವುದು ಅಗತ್ಯವಾದ ಹೆಜ್ಜೆಯಾಗಿದೆ ಮತ್ತು ತೈವಾನ್‌ನ ಸ್ವಾತಂತ್ರ್ಯವನ್ನು ಬೆಂಬಲಿಸುವ ಶಕ್ತಿಗಳ ಹೊರಗಿನ ಮಧ್ಯಸ್ಥಿಕೆ ಮತ್ತು ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ತೈವಾನ್ 1949 ರಿಂದ ಚೀನಾದ ಮುಖ್ಯ ಭೂಭಾಗದಿಂದ ಸ್ವತಂತ್ರಗೊಂಡು ಆಡಳಿತ ನಡೆಸುತ್ತಿದೆ. ಬೀಜಿಂಗ್ ದ್ವೀಪವನ್ನು ತನ್ನ ಪ್ರಾಂತ್ಯವೆಂದು ಪರಿಗಣಿಸುತ್ತದೆ, ಆದರೆ ತೈವಾನ್ - ತನ್ನದೇ ಆದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಹೊಂದಿರುವ ಪ್ರದೇಶ.  ಇದು ಸ್ವಾಯತ್ತ ದೇಶ ಎಂದು ಗುರುತಿಸಿಕೊಂಡಿದ್ದು ಹಲವಾರು ರಾಷ್ಟ್ರಗಳೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದೆ.

ಸುದ್ದಿ ಓದಿ