ಜಿಲ್ಲಾ ಲೇಖಕಿಯರ ಸಂಘದಿಂದ ದತ್ತಿ ಪುಸ್ತಕ ಪ್ರಶಸ್ತಿ ಸಮಾರಂಭ
Charity Book Award Ceremony by District Writers Association
ಲೋಕದರ್ಶನ ವರದಿ
ಬೆಳಗಾವಿ 30: ನಗರದ ಕನ್ನಡ ಸಾಹಿತ್ಯ ಭವದಲ್ಲಿ ಶುಕ್ರವಾರ ಜಿಲ್ಲಾ ಲೇಖಕಿಯರ ಸಂಘದದಿಂದ ಆಯೋಜಿಸಲಾದ ದತ್ತಿ ದಾನಿಗಳ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು. ಕಾರ್ಯದರ್ಶಿ ಆಶಾ ಯಮಕನಮರಡಿ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಮಹಿಳಾ ಲೇಖಕಿಯರಿಗೆ ಸಾಹಿತ್ಯ ರಚನೆಯಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಿ, ಸಂಘಟನೆಯೂ ಸಹ ರಾಜ್ಯ ಮಟ್ಟದ ಪ್ರಶಸ್ತಿ ಕೊಡುವಷ್ಟು ಬೆಳೆದಿದೆ. ಇಲ್ಲಿನ ಲೇಖಕಿಯರ ಸಾಹಿತ್ಯ ಕ್ಷೇತ್ರದಲ್ಲಿ ಮೂಡಿಸಿದ ಹೆಜ್ಜೆ ಗುರುತು ನಿದರ್ಶನವಾಗಿದೆ ಎಂದು ಹೇಳಿದರು.
ಅಧ್ಯಕ್ಷರಾದ ಸುಮಾ ಕಿತ್ತೂರ ಮಾತನಾಡಿ, ಲೇಖಕಿಯರ ಸಂಘದ ಲೇಖಕಿಯರ ಸಾಧನೆ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿದ ನಮ್ಮ ಲೇಖಕಿಯರು ತಾವು ಪ್ರಶಸ್ತಿ ಪಡೆಯುವುದರೊಂದಿಗೆ ಹೊರಜಿಲ್ಲೆಯವರಿಗೆ ಪ್ರಶಸ್ತಿ ಕೊಡುವ ಮಟ್ಟಿಗೆ ಬೆಳವಣಿಗೆ ಹೊಂದಿದ್ದು ಸಂಘದ ಘನತೆ ಗೌರವ ಹೆಚ್ಚಿಸಿದೆ ಎಂದು ಹೇಳಿದರು.
ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ : ಹೇಮಾವತಿ ಸುನೊಳ್ಳಿ ಅವರ ದತ್ತಿ ಪ್ರಶಸ್ತಿ ರಂಜಿತಾ ದರ್ಶಿನಿ ಆರ್ .ಎಸ್ . ಮಂಡ್ಯ ಅವರ ಮನಸ್ವಿ ಕಾದಂಬರಿಗೆ ದೊರಕಿತು. ಜ್ಯೋತಿ ಬದಾಮಿ ಅವರ ಪುಸ್ತಕ ಪ್ರಶಸ್ತಿ ಮಾಲಾ ಅಕ್ಕಿ ಶೆಟ್ಟಿ ಅವರಿಗೆ ತಿಳಿದು ನಡೆದರೆ ಕೃತಿಗೆ ದೊರಕಿತು. ಶಕುಂತಲಾ ಹಿರೇಮಠ ಅವರ ಚಿಗುರಿದ ಕನಸು ಕೃತಿಗೆ ವಿದ್ಯಾ ಹುಂಡೆಕಾರ ಅವರ ಪುಸ್ತಕ ಪ್ರಶಸ್ತಿ ದೊರಕಿತು.
ರೋಹಿಣಿ ಯಾದವಾಡ ಅವರ ಪುಸ್ತಕ ಪ್ರಶಸ್ತಿ ಭವ್ಯ ಸಂಪಗಾರ್ ಅವರ ನಾಳೆಗಳ ನೆಚ್ಚಿ ಕೃತಿಗೆ ದೊರಕಿತು. ಇಂದಿರಾ ಮೋಟೆಬೆನ್ನೂರು ಅವರ ಪುಸ್ತಕ ಪ್ರಶಸ್ತಿ ಶ್ವೇತಾ ನರಗುಂದ ಅವರ ಡೆಡ್ ಲೈನ್ ಮತ್ತು ಡಿನ್ನರ್ ಕೃತಿಗೆ ದೊರಕಿತು. ಪ್ರಭಾಪಾಟೀಲ್ ಅವರ ದತ್ತಿ ಪುಸ್ತಕ ಪ್ರಶಸ್ತಿ ನೀತಾರಾವ್ ಅವರ ಶಾಪಗ್ರಸ್ತ ದೇವ ಕನ್ನಿಕೆ ಕೃತಿಗೆ ದೊರಕಿತು.ಇಂದಿರಾ ಮೋಟೆಬೆನ್ನೂರ ಅವರ ಎದೆಯ ಬೆಳಕನ್ನರಸುತ್ತಾ ಕೃತಿಗೆ ಸುಧಾ ಪಾಟೀಲ ದತ್ತಿ ಪ್ರಶಸ್ತಿ ದೊರಕಿತು. ದಾನಿಗಳು ತಾವಿಟ್ಟ ದತ್ತಿ ದಾನದ ಬಗ್ಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದರು
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 