ಅಂತರರಾಷ್ಟ್ರೀಯ

ನಗರಗಳಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಲು ಕೇಂದ್ರದ ಚಿಂತನೆ

ನಗರಗಳಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಲು ಕೇಂದ್ರದ ಚಿಂತನೆ

ನವದೆಹಲಿ, ಸೆಪ್ಟೆಂಬರ್ 3: ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು .

ವಸತಿ ಹಾಗೂ ನಗರಾಭಿವೃದ್ಧಿ ಜಂಟಿ ನಿರ್ದೇಶಕ ಸಂಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ನರೇಗಾವನ್ನು ಸಣ್ಣ ಮತ್ತು ಮಧ್ಯಮ ನಗರಗಳಿಗೂ  ವಿಸ್ತರಿಸುವ ಚಿಂತನೆ ಮಾಡಲಾಗಿದ್ದು, ಇದಕ್ಕಾಗಿ 35,068 ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ  ಆಗಿರುವ ಪರಿಣಾಮ ತಗ್ಗಿಸುವ ಉದ್ದೇಶದಿಂದ ಸಣ್ಣ ನಗರಗಳಲ್ಲಿ ಮೊದಲು ನರೇಗಾ ಯೋಜನೆಯನ್ನು ಆರಂಭಿಸಲಾಗುವುದು ಎಂದರು  .

ರಸ್ತೆ ನಿರ್ಮಾಣ, ಬಾವಿ ನಿರ್ಮಾಣದಂತಹ ಕೆಲಸಗಳು ಇದರಲ್ಲಿ ಒಳಗೊಳ್ಳಲಿವೆ. ದೇಶದ 270 ಮಿಲಿಯನ್ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಈ ಯೋಜನೆಯನ್ವಯ ಗ್ರಾಮೀಣ ಒಳನಾಡು ಪ್ರದೇಶಗಳಲ್ಲಿ ವರ್ಷಕ್ಕೆ ಕನಿಷ್ಠ ನೂರು ದಿನ ಕೆಲಸದ ಖಾತರಿಯಿದ್ದು, ಪ್ರತಿದಿನ 202 ರೂ. ಕನಿಷ್ಠ ಕೂಲಿ  ನೀಡಲಾಗುತ್ತಿದೆ. 

ಸುದ್ದಿ ಓದಿ