ಹೂವಿನ ಹಡಗಲಿ

ಮನೆಯ ಕಿಟಕಿ ಮುರಿದು ನಗದು,ಚಿನ್ನಾಭರಣ ಕಳ್ಳತನ

ಮನೆಯ ಕಿಟಕಿ ಮುರಿದು ನಗದು,ಚಿನ್ನಾಭರಣ ಕಳ್ಳತನ


ಹೂವಿನಹಡಗಲಿ 21 : ದರೋಡೆಕೊರರು ಮನೆಯ ಹಿಂಭಾಗಲದ ಕಿಟಕಿ ಮುರಿದು  ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಪಟ್ಟಣದ ಸೋಗಿ ರಸ್ತೆಯ 9ನೇ ವಾರ್ಡ್‌ ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಪಟ್ಟಣದ ಓಷಧಿ ಮಾರಾಟಗಾರ ಪ್ರತಿನಿಧಿ ಅಜಮಾತುಲ್ಲಾ  ಎಂಬುವವರು ಮನೆ ಬೀಗ ಹಾಕಿಕೊಂಡು ಪಟ್ಟಣದ ಸಹೋದರಿ ಮನೆಗೆ ಹೋಗಿದ್ದ ವೇಳೆ ರಾತ್ರಿ ಕಳ್ಳರು ಮನೆಯ  ಹಿಂಭಾಗದ ಕಿಟಕಿಯ 4 ಕಬ್ಬಿಣ ಸರಳನ್ನು ಕೊರೆದು ಮನೆ ಒಳಗಡೆ ಹೋಗಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿದ್ದ  15 ತೊಲೆ  ಬಂಗಾರ, ಜತೆಗೆ ಬೆಳ್ಳಿ , ? 65 ಸಾವಿರ ನಗದು ಹಣವನ್ನು ದೋಚಿದ್ದಾರೆ.  ಘಟನಾ ಸ್ಥಳಕ್ಕೆ ಸಿಪಿಐ ದೀಪಿಕ್ ಆರ್‌. ಭೂಸರೆಡ್ಡಿ, ಪಿಎಸ್ ಐ ಮಣಿಕಂಠ ಮತ್ತುಬೆರಳಚ್ಚು ತಜ್ಞರು, ಶ್ವಾನ ತಪಾಸಣಾ ದಳ ಭೇಟಿ ನೀಡಿ ತಪಾಸಣೆ ನಡೆಸಿದರು. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ