ಅಂತರರಾಷ್ಟ್ರೀಯ

ಬ್ರೆಜಿಲ್ ನಲ್ಲಿ 24 ಗಂಟೆಯಲ್ಲಿ ಕೊರೋನ ಸೋಂಕಿಗೆ 1,386 ಸಾವು

ಬ್ರೆಜಿಲ್ ನಲ್ಲಿ  24 ಗಂಟೆಯಲ್ಲಿ  ಕೊರೋನ ಸೋಂಕಿಗೆ  1,386 ಸಾವು

ಬ್ರೆಸಿಲಿಯಾ, ಫೆಬ್ರವರಿ 28: ಬ್ರೆಜಿಲ್ ನಲ್ಲಿ ಕಳದೆ   24 ಗಂಟೆಗಳಲ್ಲಿ  ಕೊರೊನಾ ಸೋಂಕಿನಿಂದ  1,386 ಹೊಸ ಸಾವಿನ ಪ್ರಕರಣ ವರದಿಯಾಗಿದೆ. 

ಪರಿಣಾಮ ದೇಶದಲ್ಲಿ ಈವರೆಗೆ ಮೃತರ ಸಂಖ್ಯೆ 2, 54,221 ಕ್ಕೆ ಏರಿಕೆಯಾಗಿದೆ  ಎಂದು ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಒಟ್ಟು 61,602 ಹೊಸ ಪ್ರಕರಣಗಳು ವರದಿಯಾಗಿದೆ  ರಾಷ್ಟ್ರೀಯ ಪ್ರಕರಣಗಳ  ಸಂಖ್ಯೆ 10,517,232 ಕ್ಕೆ ತಲುಪಿದೆ ಎಂದೂ  ಸಚಿವಾಲಯದ ವರದಿ  ತಿಳಿಸಿದೆ.

ಅಮೆರಿಕದ ನಂತರ ಹೆಚ್ಚು ಸಾವಿನ  ಪ್ರಕರಣ ವರದಿಯಾಗಿದೆ   ಭಾರತದ ನಂತರದ ಬ್ರೆಜಿಲ್ ಮೂರನೇ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿದ ದೇಶವಾಗಿದೆ.  ಶುಕ್ರವಾರದ ವೇಳೆಗೆ, 6.4 ಮಿಲಿಯನ್ ಬ್ರೆಜಿಲಿಯನ್ನರು ಕೋವಿಡ್ -19 ವಿರುದ್ಧ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.

ಸುದ್ದಿ ಓದಿ