ಕೊರೋನ: ಪ್ಯಾಲೆಸ್ಟೈನ್ ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆ
ಗಾಜಾ, ಫೆ. 2 :ಕೊರೋನ ಸೋಂಕಿನ ಕಾರಣಕ್ಕಾಗಿ ಪ್ಯಾಲೆಸ್ಟೈನ್ ನಲ್ಲಿ ತುರ್ತು ಪರಿಸ್ಥಿತಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ. ಇಂದಿನಿಂದ ಇದು ಮತ್ತೆ ಹೊಸದಾಗಿ ಪ್ರಾರಂಭವಾಗಲಿದೆ ಎಂದು ನಾಯಕ ಮೊಹಮ್ಮದ್ ಅಬ್ಬಾಸ್ ಹೇಳಿದ್ದಾರೆ. ಕಳೆದ ವಾರದಲ್ಲಿ, ಪ್ಯಾಲೆಸ್ಟೈನ್ ನಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತು . ಆರೋಗ್ಯ ಸಚಿವಾಲಯದ ಪ್ರಕಾರ, ಪ್ಯಾಲೆಸ್ಟೈನ್‌ನಲ್ಲಿ ಒಟ್ಟು 179,505 ಪ್ರಕರಣಗಳು ದಾಖಲಾಗಿದ್ದು, ಈ ವರೆಗೆ 2,023 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.