ಅಂತರರಾಷ್ಟ್ರೀಯ

ಕೊರೊನಾ ಸೋಂಕು: ಇಸ್ರೇಲ್‌ನಲ್ಲಿ ಲಾಕ್‌ಡೌನ್ ವಿಸ್ತರಣೆ

ಕೊರೊನಾ ಸೋಂಕು:  ಇಸ್ರೇಲ್‌ನಲ್ಲಿ ಲಾಕ್‌ಡೌನ್  ವಿಸ್ತರಣೆ

ಟೆಲ್ ಅವೀವ್, ಫೆಬ್ರವರಿ 1:ಕೊರೋನ ಕಾರಣಕ್ಕಾಗಿ ಇಸ್ರೇಲ್ ಸರ್ಕಾರ ಬರುವ 5 ರವರೆಗೂ   ಲಾಕ್‌ಡೌನ್  ವಿಸ್ತರಿಸಿದೆ  ಎಂದು  ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಸೋಮವಾರ ಪ್ರಕಟಿಸಿದೆ. ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಬರುವ ಭಾನುವರದ ವರೆಗೂ  ಸ್ಥಗಿತಗೊಳಿಸಲಾಗುವುದು ಪ್ರಕಟಿಸಲಾಗಿದೆ. ಜನವರಿ 8 ರಂದು ಜಾರಿಗೆ ತರಲಾದ  ನಿರ್ಬಂಧಗಳ ವಿಸ್ತರಣೆಯನ್ನು ಅನುಮೋದಿಸಲು ಇಸ್ರೇಲ್ ಸರ್ಕಾರ ಭಾನುವಾರ ರಾತ್ರಿ ಸಭೆ ಕರೆದಿದೆ. ಆರಂಭದಲ್ಲಿ, ಲಾಕ್‌ಡೌನ್ ಕೇವಲ  ಜನವರಿ 31 ರವರೆಗೆ ಮತ್ರ ಜಾರಿಯಲ್ಲಿರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಲಾಕ್‌ಡೌನ್ ವಿಸ್ತರಣೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ನೆತನ್ಯಾಹು  ಕಚೇರಿ ಸೋಮವಾರವೇ ಘೋಷಿಸಿದೆ.ಈ ನಡುವೆ ಇದೆ  7 ರ ಮಧ್ಯರಾತ್ರಿಯವರೆಗೂ ಬೆನ್ ಗುರಿಯನ್ ವಿಮಾನ ನಿಲ್ದಾಣವು ಹೆಚ್ಚುವರಿ ಎರಡು ದಿನಗಳವರೆಗೆ ಮುಚ್ಚಲ್ಪಡುತ್ತದೆ. ಕರೋನವೈರಸ್ ನಿರ್ಬಂಧಗಳನ್ನು ಮತ್ತಷ್ಟು ಕಾಲ ವಿಸ್ತರಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಲು ಬುಧವಾರ ಮಹತ್ವದ  ಸಂಪುಟ ಸಭೆ ನಡೆಯಲಿದೆ.





ಸುದ್ದಿ ಓದಿ