ಆಸ್ಟ್ರಿಯಾದಲ್ಲಿ ಕೋವಿಡ್ ಲಸಿಕೆ ನಂತರವೂ 63 ಜನರ ಸಾವು
ವಿಯೆನ್ನಾ ಏಪ್ರಿಲ್ 8 :ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ ಡಿಸೆಂಬರ್ 27 ಮತ್ತು ಏಪ್ರಿಲ್ 2 ರ ನಡುವಣ ಅವಧಿಯಲ್ಲಿ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್ ಸರ್ಕಾರಿ ವಕ್ತಾರರು ಹೇಳಿದ್ದಾರೆ.ಕಳೆದ ವಾರ, ಕರೋನ ಸೋಂಕಿನ ವಿರುದ್ಧ ಲಸಿಕೆ ಹಾಕಿದ ನಂತರ ಸುಮಾರು 55 ಸಾವುಗಳು ದಾಖಲಾಗಿವೆ ಎಂದು ವರದಿಯಾಗಿದೆ. ಅಸ್ಟ್ರಾಜೆನಿಕಾ ಲಸಿಕೆ ಹಾಕಿದ ನಂತರ 63 ಸಾವು-ನೋವುಗಳು ವರದಿಯಾಗಿದೆ. ನಾಲ್ಕು ಪ್ರಕರಣಗಳಲ್ಲಿ, ಶವಪರೀಕ್ಷೆ ವರದಿ ಸಾವು ಮತ್ತು ಲಸಿಕೆಯ ನಡುವಿನ ಸಂಬಂಧವನ್ನು ತಳ್ಳಿಹಾಕಿದೆ. ಲಸಿಕೆ ಹಾಕಿಸಿಕೊಂಡ 23 ಪ್ರಕರಣಗಳಲ್ಲಿ ವರದಿಯ ಪ್ರಕಾರ ಅವರೆಲ್ಲರೂ ಗಂಭೀರ ಕಾಯಿಲೆಗಳನ್ನು ಹೊಂದಿದ್ದರು, ಪ್ರಸ್ತುತ ಇನ್ನೂ 20 ಪ್ರಕರಣಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಲಸಿಕೆ ನೀಡಿಕೆ ಮತ್ತು ದಾಖಲಾದ ಸಾವುನೋವುಗಳ ನಡುವೆ ಯಾವುದೇ ಸಂಬಂಧ ಇನ್ನು ದೃಡಪಟ್ಟಿಲ್ಲ .