ಅಂತರರಾಷ್ಟ್ರೀಯ

ರಷ್ಯಾ : 24 ಗಂಟೆಯಲ್ಲಿ 11,749 ಕೋವಿಡ್ ಪ್ರಕರಣ ದಾಖಲು

ರಷ್ಯಾ : 24 ಗಂಟೆಯಲ್ಲಿ 11,749 ಕೋವಿಡ್ ಪ್ರಕರಣ ದಾಖಲು

ಮಾಸ್ಕೋ, ಫೆ 24: ರಷ್ಯಾ ದೇಶದಲ್ಲಿ ಕೋವಿಡ್ ಸೋಂಕಿನ ಏಕದಿನ ಹೆಚ್ಚಳ ಅಕ್ಟೋಬರ್ 8 ರಿಂದ ಕಡಿಮೆ ಮಟ್ಟಕ್ಕೆ ಇಳಿದಿದ್ದು, 24 ಗಂಟೆಯಲ್ಲಿ , 11,749 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಸೋಮವಾರ ತಿಳಿಸಿದೆ. ಕಳೆದ ವರ್ಷ 2020 ಅಕ್ಟೋಬರ್ 8 ರಂದು ರಷ್ಯಾ 11,493 ಕೊರೋನಾ ವೈರಸ್ ಪ್ರಕರಣಗಳನ್ನು ದೃಢಪಡಿಸಿತ್ತು. "ಕಳೆದ ದಿನದಲ್ಲಿ, 85 ಪ್ರದೇಶಗಳಲ್ಲಿ 11,749 ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 1,246 ಪ್ರಕರಣಗಳು ಸಕ್ರಿಯವಾಗಿ ಪತ್ತೆಯಾಗಿವೆ, ಜನರು ಯಾವುದೇ ಕ್ಲಿನಿಕಲ್ ಲಕ್ಷಣಗಳನ್ನು ತೋರಿಸಲಿಲ್ಲ" ಎಂದು ಕೇಂದ್ರ ಹೇಳಿದೆ.ಸಂಚಿತ ಪ್ರಕರಣಗಳ ಸಂಖ್ಯೆ ಈಗ 4,200,902 ತಲುಪಿದೆ. ನಿರ್ದಿಷ್ಟ ಅವಧಿಯಲ್ಲಿ 1,417 ಹೊಸ ಕರೋನವೈರಸ್ ಪ್ರಕರಣಗಳನ್ನು ಮಾಸ್ಕೋ ದೃಢಪಡಿಸಿದೆ.

ಸುದ್ದಿ ಓದಿ