ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಿಲ್ಲ : ಇಸ್ರೇಲ್
ಟೇಲ್ ಅವಿವ್, ಏ 18:ಮಾಸ್ಕ್ ಧರಿಸುವುದರಿಂದ ಕೊರೋನಾ ಕಡಿಮೆಯಾಗುತ್ತದೆಯೇ ಪ್ರಶ್ನೆಗಳು ಆಗಾಗ ಕಾಡುತ್ತಿವೆ, ಮಾಸ್ಕ್ ಧಾರಣೆ ಎಲ್ಲಿ ಮಾಡಬೇಕು,? ಯಾವಾಗ ಮಾಡಬೇಕು? ಎಂಬ ಪ್ರಶ್ನೆಗಳು ಕೇಳಿ ತೂರಿ ಬರುತ್ತಿವೆ. ಕೊರೋನ ಪ್ರಕರಣ ಕಡಿಮೆಯಾಗುತ್ತಿರುವ ಕಾರಣ ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಅಗತ್ಯವಿಲ್ಲ ಎಂದು ಇಸ್ರೇಲ್ನಲ್ಲಿ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾ ಸೋಂಕು ಪ್ರಕರಣಗಳ ಕಡಿಮೆಯಾಗುತ್ತಿರುವ ಕಾರಣ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದೂ ಸಚಿವಾಲಯ ಹೇಳಿದೆ. ಆದರೂ, ದೊಡ್ಡ ಹೊರಾಂಗಣದಲ್ಲಿ ನಡೆಯುವ ಸಭೆ-ಸಮಾರಂಭ ಮತ್ತು ಕೂಟಗಳಲ್ಲಿ ಮುಖಗವಸು ಧರಿಸಬೇಕೆಂದು ಸಚಿವಾಲಯ ಸಲಹೆ ನೀಡಿದ್ದರೂ ಒಳಾಂಗಣದಲ್ಲಿ ಮಾತ್ರ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ದೇಶಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ತುಂಬಾ ಕಡಿಮೆಯಾಗುತ್ತಿರುವ ಕಾರಣ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕರು ಆದೇಶ ತಿದ್ದುಪಡಿ ಮಾಡಿದ್ದು, ಹೊಸ ನಿಯಮ ಭಾನುವಾರದಿಂದ ಜಾರಿಗೆ ಬರುತ್ತಿದೆ. ವಿಶ್ವದೆಲ್ಲೆಡೆ ಒಟ್ಟು 14ಕೋಟಿ ಅಧಿಕ ಸೋಂಕಿತ ಪ್ರಕರಣಗಳಿದ್ದು ಇವರ ಪೈಕಿ 11 ಕೋಟಿ ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ.