ಅಂತರರಾಷ್ಟ್ರೀಯ

ಮಧ್ಯ ಕೊಲಂಬಿಯಾ: ಚಿನ್ನದ ಗಣಿ ಕುಸಿತ, 15 ಕಾರ್ಮಿಕರು ನಾಪತ್ತೆ

ಮಧ್ಯ ಕೊಲಂಬಿಯಾ: ಚಿನ್ನದ ಗಣಿ ಕುಸಿತ, 15 ಕಾರ್ಮಿಕರು ನಾಪತ್ತೆ

ಮೆಕ್ಸಿಕೊ ನಗರ, ಮಾರ್ಚ್ 27: ಕೇಂದ್ರ ಕೊಲಂಬಿಯಾದ ಕ್ಯಾಲ್ಡಾಸ್‌ನಲ್ಲಿ ಚಿನ್ನದ ಗಣಿ ಕುಸಿದ ಹಿನ್ನೆಲೆಯಲ್ಲಿ ಕನಿಷ್ಠ 15 ಗಣಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ರಾಷ್ಟ್ರೀಯ ಗಣಿಗಾರಿಕೆ ಸಂಸ್ಥೆ ಎಎನ್‌ಎಂ ಅಧ್ಯಕ್ಷ ಜುವಾನ್ ಮಿಗುಯೆಲ್ ಡುರಾನ್ ಹೇಳಿದ್ದಾರೆ. “ಕಾಲ್ಡಾಸ್ ಇಲಾಖೆಯ ನೀರಾದಲ್ಲಿರುವ ಚಿನ್ನದ ಗಣಿಯಲ್ಲಿ ಘಟನೆ ನಡೆದಿದ್ದು, ತುರ್ತು ರಕ್ಷಣಾಕಾರ್ಯ ನಡೆಯುತ್ತಿ . ಗಣಿಯಲ್ಲಿದ್ದ ಸುಮಾರು 15 ಕಾರ್ಮಿಕರು ಕಾಣೆಯಾಗಿದ್ದಾರೆ, ಎಎನ್ಎಂ ಗಣಿ ರಕ್ಷಕರ ತಂಡ ಅಲ್ಲಿಗೆ ಹೋಗುತ್ತಿದೆ, ”ಎಂದು ಡುರಾನ್ ತಮ್ಮ ಟ್ವಿಟ್ಟರ್ ಪುಟದಲ್ಲಿ ಶುಕ್ರವಾರ ತಿಳಿಸಿದ್ದಾರೆ ಅವಶೇಷಗಳ ಅಡಿಯಲ್ಲಿ 20 ಜನರು ಸಿಲುಕಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಗಣಿ ಕುಸಿತಕ್ಕೆ ಖಚಿತ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

    

ಸುದ್ದಿ ಓದಿ