ಅಂತರರಾಷ್ಟ್ರೀಯ

ಕೊಲಂಬಿಯಾದಲ್ಲಿ ಕೊರೋನ ಸೋಂಕಿಗೆ 50 ಸಾವಿರ ಜನ ಬಲಿ

ಕೊಲಂಬಿಯಾದಲ್ಲಿ ಕೊರೋನ  ಸೋಂಕಿಗೆ  50 ಸಾವಿರ ಜನ ಬಲಿ

ಮೆಕ್ಸಿಕೊ ಸಿಟಿ, ಜನವರಿ 22: ಕೊಲಂಬಿಯಾದಲ್ಲಿ ಕರೋನ ಸೋಂಕಿನಿಂದ   ಕಳೆದ 24 ಗಂಟೆಗಳಲ್ಲಿ 395 ಜನ ಮೃತಪಟ್ಟಿದ್ದಾರೆ. ಪರಿಣಾಮ ದೇಶದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 50,187 ಕ್ಕೆ ಏರಿಕೆಯಾಗಿದೆ. ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೃಡಪಡಿಸಿದ ಪ್ರಕರಣಗಳ ಸಂಖ್ಯೆ ಇದೇ ಅವಧಿಯಲ್ಲಿ 15,366 ರಿಂದ 1,972,345 ಕ್ಕೆ ಏರಿಕೆಯಾಗಿದೆ ಎಂದೂ ಸಚಿವಾಲಯದ ಹೊಸ  ವರದಿ ತಿಳಿಸಿದೆ. ಲ್ಯಾಟಿನ್ ಅಮೆರಿಕನ್ ರಾಷ್ಟ್ರದಲ್ಲಿ ಪ್ರಸ್ತುತ 115,000 ಕ್ಕೂ ಹೆಚ್ಚು ಜನರು ಸೋಂಕಿನಿಂದ  ಬಳಲುತ್ತಿದ್ದಾರೆ. ಕಳೆದ  ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು  ಇಲ್ಲಿಯವರೆಗೆ, ವಿಶ್ವದಾದ್ಯಂತ 97.4 ದಶಲಕ್ಷಕ್ಕೂ ಹೆಚ್ಚು ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ, 2.08 ದಶಲಕ್ಷಕ್ಕೂ ಹೆಚ್ಚು ಸಾವು-ನೋವುಗಳು ಈವರೆಗೆ ಸಂಭವಿಸಿವೆ ಎಂದೂ  ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. 



ಸುದ್ದಿ ಓದಿ