ಅಂತರರಾಷ್ಟ್ರೀಯ

ಕೊಲಂಬಿಯಾದಲ್ಲಿ ಕೊರೋನ ಸೋಂಕಿಗೆ 60 ಸಾವಿರ ಬಲಿ

ಕೊಲಂಬಿಯಾದಲ್ಲಿ ಕೊರೋನ ಸೋಂಕಿಗೆ  60 ಸಾವಿರ ಬಲಿ

ಬೊಗೋಟಾ, ಮಾರ್ಚ್ 4 : ಕಳೆದ 24 ಗಂಟೆಗಳಲ್ಲಿ ಕೊಲಂಬಿಯಾದ ಕೊರೋನ  ಸೋಂಕಿಗೆ  110 ಜನ ಹೊಸದಾಗಿ ಮೃತಪಟ್ಟಿದ್ದು, ದೇಶದಲ್ಲಿ  ಈವರೆಗೆ ಮೃತರ  60,082 ಕ್ಕೆ ಏರಿಕೆಯಾಗಿದೆ ಎಂದು   ರಾಷ್ಟ್ರೀಯ ಆರೋಗ್ಯ ಸಚಿವಾಲಯ ತಿಳಿಸಿದೆ.ಇದೇ ಅವಧಿಯಲ್ಲಿ 3,047 ಹೊಸ ಸೋಂಕು  ಪ್ರಕರಣ  ದೃಡಪಟ್ಟಿದ್ದು ,  ಒಟ್ಟು ಪ್ರಕರಣಗಳ  2,262,646 ತಲುಪಿದೆ. ಸೋಂಕು ಏಕಾಏಕಿ ಪ್ರಾರಂಭವಾದಾಗಿನಿಂದ 2.16 ದಶಲಕ್ಷಕ್ಕೂ ಹೆಚ್ಚು ರೋಗಿಗಳು ಈವರೆಗೆ  ಚೇತರಿಸಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11, 2020 ರಂದು ಕೋವಿಡ್ – 19  ಏಕಾಏಕಿ ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವದಾದ್ಯಂತ 115.12 ದಶಲಕ್ಷಕ್ಕೂ ಹೆಚ್ಚು ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ, 2.55 ದಶಲಕ್ಷಕ್ಕೂ ಹೆಚ್ಚು ಸಾವು- ನೋವುಗಳು ವರದಿಯಾಗಿದೆ  ಎಂದೂ ಅಮೆರಿಕದ  ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. 



ಸುದ್ದಿ ಓದಿ