ಚೀನಾದಲ್ಲಿ ಪ್ರಬಲ ಭೂಕಂಪ, ಇಬ್ಬರ ಸಾವು
ಬೀಜಿಂಗ್ , ಮೇ 22 : ಚೀನಾದಲ್ಲಿ ಶುಕ್ರವಾರ ಎರಡು ಕಡೆ ಪ್ರಬಲ ಭೂಕಂಪ ಸಂಭವಿಸಿದ್ದು , ಇಬ್ಬರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿದೆ. ಎರಡನೇ ಬಾರಿ ದಕ್ಷಿಣ ಕ್ವಿಂಗೈ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ್ದು ಪರ್ವತ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದೂ ಹೇಳಲಾಗಿದೆ. ಆದರೆ ಈ ಕಂಪನದಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದೂ ವರದಿಯಾಗಿದೆ. ಈ ಎರಡು ಭೂಕಂಪಗಳ ಕೇಂದ್ರಬಿಂದು ಸುಮಾರು 500 ಮೈಲುಗಳ ದೂರದಲ್ಲಿದ್ದು, ಇವೆರಡೂ ಭೂಕಂಪಗಳು ಹಿಮಾಲಯದ ಪರ್ವತ ಪ್ರದೇಶಗಳಲ್ಲಿನ ಘರ್ಷಣೆಯ ಫಲ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಹೇಳಿದೆ. ಕಂಪನ ಸ್ಥಳಕ್ಕೆ ತುರ್ತು ಪರಿಹಾರ ರಕ್ಷಣಾ ಸಿಬ್ಬಂದಿ ತೆರಳಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿದೆ.