ಚಿಕ್ಕೋಡಿ

ವಾಳಕಿ ಪ.ಜಾ ಕಾಲನಿಯಲ್ಲಿ ರೂ75 ಲಕ್ಷದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ವಾಳಕಿ ಪ.ಜಾ ಕಾಲನಿಯಲ್ಲಿ ರೂ75 ಲಕ್ಷದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
CC road and drain construction work worth ₹75 lakh launched in Valki SC Colony


ಚಿಕ್ಕೋಡಿ  21: ತಾಲೂಕಿನ ವಾಳಕಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ?75 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಅನುದಾನ ಮಂಜೂರಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.ಈ ಸಂದರ್ಭದಲ್ಲಿ ಸುಜಯ ಕಾಕಾಸಾಬ ಪಾಟೀಲ, ಅಣ್ಣಾಸಾಹೇಬ ನಾಯಿಕ, ಖಂಡೇರಾವ ಪಾಟೀಲ, ಕೃಷ್ಣಾತ ಘಸ್ತೆ, ಧನಾಜಿ ಪಾಟೀಲ, ಪರಶುರಾಮ ನಾಯಿಕ, ರಾಜು ಗೋಮಾಯಿ, ರತ್ನಪ್ಪ ತರಾಳ, ಶಿವಗೌಂಡ ಬಂಡಕನೂರ, ಮಹಾದೇವ ಲಾಟಕರ, ರೋಹಿತ ಲಾಟಕರ, ನಿಖಿನ ಗೋಬಾಯಿ, ರಾಜು ದೇಶಮಾನೆ, ಪಾರಿಸಾ ಘಸ್ತೆ, ಬಾಬುರಾವ ಘಸ್ತೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ