ಅಂತರರಾಷ್ಟ್ರೀಯ

ಕೆನಡಾ: ವಸತಿ ಕಟ್ಟಡದಲ್ಲಿ ಬೆಂಕಿ: ನಾಲ್ವರು ಮಕ್ಕಳು ಸೇರಿ ಏಳು ಮಂದಿ ಸಾವು

ಕೆನಡಾ: ವಸತಿ ಕಟ್ಟಡದಲ್ಲಿ ಬೆಂಕಿ: ನಾಲ್ವರು ಮಕ್ಕಳು ಸೇರಿ ಏಳು ಮಂದಿ ಸಾವು

ಮಾಸ್ಕೊ, ಜುಲೈ 3: ಕೆನಡಾದ ಅಲ್ಬರ್ಟಾ ಪ್ರಾಂತ್ಯದ ಚೆಸ್ಟ್‍ ಮೆರ್ ಪಟ್ಟಣದಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿ ನಾಲ್ವರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.  

ದುರಂತದಲ್ಲಿ ಐವರಿಗೆ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಮಕ್ಕಳು ಸೇರಿ ಐವರು ಕಟ್ಟಡದ ಬೆಂಕಿ ಜ್ಞಾಲೆಗಳಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಂಕಿ ಅನಾಹುತ ಸಂಭವಿಸಿದ ಕಟ್ಟಡದಲ್ಲಿ ಎರಡು ಮುಸ್ಲೀಂ ಕುಟುಂಬಗಳು ನೆಲೆಸಿದ್ದವು ಎಂದು ಸಿಟಿವಿ ಸುದ್ದಿ ಸಂಸ್ಥೆ ತಿಳಿಸಿದೆ. ಬೆಂಕಿಗೆ ಕಾರಣವೇನೆಂಬುದು ಇನ್ನೂ  ಧೃಡಪಟ್ಟಿಲ್ಲ.

ಸುದ್ದಿ ಓದಿ