ಬಸ್ ಪಲ್ಟಿ ಃ 20 ಜನ ಜೀವಾಪಾಯದಿಂದ ಪಾರು
ಚನ್ನಮ್ಮನ ಕಿತ್ತೂರು 10ಃ ಕಿತ್ತೂರು ಮತ್ತು ದೇಗಾಂವ ಮಾರ್ಗಮದ್ಯದ ಸವಳಮುಖ ಕ್ರಾಸ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಸ್ಕಿಯಿಂದ ಪಣಜಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ ಪಲ್ಟಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ರಾಯಚೂರ ವಿಭಾಗದ ಮಸ್ಕಿ ಡಿಪೋದ ಈಶಾನ್ಯ ಕರ್ನಾಟಕ ಸಾರಿಗೆ ಬಸ್ನಲ್ಲಿ 20 ಜನ ಪ್ರಯಾಣಿಸುತ್ತಿದ್ದರು. ಆದರೇ ಈ ದುರ್ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಆದರೇ ಬಸ್ ಚಾಲಕನಿಗೆ ಮಾತ್ರ ಗಾಯವಾಗಿದ್ದು ಸ್ಥಳಕ್ಕೆ ಕಿತ್ತೂರು ಪಿಎಸ್ಐ ಸಂಜೀವಕುಮಾರ ಕಲ್ಲೂರ ಭೇಟಿ ನೀಡಿದ್ದಾರೆ.
ಬಾಕ್ಸ ಐಟಂ :
ಈ ಸರ್ಕಾರಿ ಬಸ್ ಪಲ್ಟಿಯಾದ ಸ್ಥಳದಲ್ಲಿ ಈ ಹಿಂದೆ ಅಡುಗೆಗೆ ಬಳಸುವ ಎಣ್ಣಿಯು ಬಿದ್ದ ಪರಿಣಾಮದಿಂದ ವಾಹನಗಳೆರೆಡು ಬಿದ್ದಿದ್ದವು. ಇಷ್ಟಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಪರಿಣಾಮ ಈಗ ಸರ್ಕಾರಿ ಬಸ್ ಕೂಡ ಅಪಘಾತಕ್ಕಿಡಾಗಿದ್ದು ಇನ್ನಾದರೂ ಅಧಿಕಾರಿಗಳು ಇದನ್ನು ಸರಿ ಪಡಿಸುವರೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 