ಬಂಕರ್ ನಿರ್ಮಾಣ ವಿಳಂಬ: ಜಮ್ಮು ಕಾಶ್ಮೀರ ಗಡಿ ಜನರ ಗೋಳಾಟ
ಜಮ್ಮು, ಸೆ 18 ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆ ನಿರಂತರ ಕದನವಿರಾಮ ಉಲ್ಲಂಘಿಸುತ್ತಿದ್ದು, ಇದೇ ವೇಳೆ ಬಂಕರ್ ನಿರ್ಮಾಣ ಯೋಜನೆಯೂ ವಿಳಂಬಗೊಂಡಿರುವ ಕಾರಣ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಸಮೀಪದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಪರದಾಡುವಂತಾಗಿದೆ.
ಬಂಕರ್ ನಿರ್ಮಾಣಗೊಳ್ಳದ ಕಾರಣ ಪಾಕಿಸ್ತಾನ ನಡೆಸುವ ಅಪ್ರಚೋದಿತ ಗುಂಡಿನ ದಾಳಿಯಿಂದ ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಆತಂಕ ಎದುರಾಗಿದೆ. ಬದುಕು ಅಪಾಯದಲ್ಲಿದ್ದು, ಭಯದ ನೆರಳಿನಲ್ಲಿ ಜೀವಿಸುವಂತಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಜಮ್ಮು ಪ್ರದೇಶದಲ್ಲಿ 10 ಸಾವಿರ ಬಂಕರ್ಗಳನ್ನು ನಿರ್ಮಿಸುವುದಾಗಿ ಎರಡು ವರ್ಷಗಳ ಹಿಂದೆ ಭಾರತ ಸರ್ಕಾರ ಘೋಷಿಸಿತ್ತು. 2019 ರ ಏಪ್ರಿಲ್ ವೇಳೆಗೆ ಪೂರ್ಣಗೊಳಿಸಬೇಕಿದ್ದ ಯೋಜನೆ ವಿಳಂಬವಾಗಿದ್ದು, ಈ ಪ್ರದೇಶದ ಎಲ್ಲಾ ಐದು ಗಡಿಗಳಲ್ಲಿ ಕೇವಲ 3,500 ಬಂಕರ್ಗಳು ಮಾತ್ರ ಸಿದ್ಧವಾಗಿವೆ.
"ಯೋಜನೆ ವಿಳಂಬವಾಗಲು ಹಲವು ಕಾರಣಗಳಿವೆ" ಎಂದು ಮೂಲಗಳು ತಿಳಿಸಿದ್ದು, 2020 ರ ಅಂತ್ಯದ ವೇಳೆಗೆ ಸಂಪೂರ್ಣ ಗೊಳ್ಳಲಿದೆ ಎಂದು ಸರ್ಕಾರ ಹೇಳಿಕೊಂಡಿದೆ ಮತ್ತು ಜಮ್ಮು ಜಿಲ್ಲೆಯಲ್ಲಿ, ಈ ವರ್ಷದ ನವೆಂಬರ್ ವೇಳೆಗೆ ನಿಗದಿಪಡಿಸಿದ ಸಂಖ್ಯೆಯ ಬಂಕರ್ಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಜಮ್ಮು, ಸಾಂಬಾ, ಕಥುವಾ, ರಜೌರಿ, ಪೂಂಚ್ ಜಿಲ್ಲೆಗಳಲ್ಲಿ ಬಂಕರ್ ಗಳು ನಿರ್ಮಾಣಗೊಳ್ಳಲಿವೆ.
ಪಾಕಿಸ್ತಾನದ ನಿಯಮಿತ ಕದನ ವಿರಾಮ ಉಲ್ಲಂಘನೆ, ಕೆಲವು ಸ್ಥಳಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಕಾರ್ಯಗತಗೊಳಿಸುವ ಸಂಸ್ಥೆಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ಯೋಜನೆಯ ವಿಳಂಬದ ಹಿಂದಿನ ಕೆಲವು ಪ್ರಮುಖ ಕಾರಣಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 