ಅಂತರರಾಷ್ಟ್ರೀಯ

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೊವಿಡ್‍ ಲಸಿಕೆಗೆ ಬ್ರಿಟನ್‍ ಒಪ್ಪಿಗೆ

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೊವಿಡ್‍ ಲಸಿಕೆಗೆ ಬ್ರಿಟನ್‍ ಒಪ್ಪಿಗೆ

ಲಂಡನ್, ಡಿಸೆಂಬರ್ 30: ಮಾರಣಾಂತಿಕ ವೈರಸ್ ಹರಡುವಿಕೆ ತಡೆಯಲು ಬ್ರಿಟನ್‍ ಸರ್ಕಾರ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆ ಬಳಸಲು ಬುಧವಾರ ಒಪ್ಪಿಗೆ ನೀಡಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಬಳಕೆ ಅಧಿಕೃತಗೊಳಿಸಲು ಔಷಧ ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಹೆಚ್‌ಆರ್‌ಎ)ಯ ಶಿಫಾರಸನ್ನು ಸರ್ಕಾರ ಇಂದು ಸ್ವೀಕರಿಸಿದೆ ಎಂದು ಬ್ರಿಟನ್‍ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕ್ಲಿನಿಕಲ್ ಪ್ರಯೋಗಗಳು ಮತ್ತು ಎಂಎಚ್‌ಆರ್‌ಎ ತಜ್ಞರ ದತ್ತಾಂಶದ ಸಂಪೂರ್ಣ ವಿಶ್ಲೇಷಣೆಯನ್ನು ಅನುಸರಿಸಿ ಈ ಅನುಮತಿ ನೀಡಲಾಗಿದೆ. ಲಸಿಕೆಯು ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವದ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಲಸಿಕೆ ಪಡೆಯುವ ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡಿಕೆ ಕುರಿತ ಜಂಟಿ ಸಮಿತಿ (ಜೆಸಿವಿಐ) ತನ್ನ ಸಲಹೆಯನ್ನು ಪ್ರಕಟಿಸಲಿದೆ. 

ಭಾರತದಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯ ತುರ್ತು ಬಳಕೆಯ ಅನುಮತಿಯನ್ನು ಕೋರಿ ಈ ತಿಂಗಳ ಆರಂಭದಲ್ಲಿ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ),  ಭಾರತೀಯ ಔಷಧ ಮಹಾ ನಿಯಂತ್ರಕರಿಗೆ (ಡಿಸಿಜಿಐ) ಗೆ ಅರ್ಜಿ ಸಲ್ಲಿಸಿತ್ತು.

ಸುದ್ದಿ ಓದಿ