ವಿದ್ಯುತ್ ಅವಘಡಕ್ಕೆ ಬ್ರೇಕ್: ಕವರ್ಡ್ ಕೇಬಲ್ ಕಂಡಕ್ಟರ್ ಅಳವಡಿಕೆ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಅಥಣಿಯಲ್ಲಿ ಚಾಲನೆ
Breakthrough to electrical accidents: MLA Lakshman Savadi launches work on installation of covered c
ಅಥಣಿ 23 : ಪಟ್ಟಣದ ವ್ಯಾಪ್ತಿಯಲ್ಲಿ ಹೆಸ್ಕಾಂ ಅಥಣಿ ಉಪವಿಭಾಗದ ವತಿಯಿಂದ ಪಟ್ಟಣದ ಜನದಟ್ಟಣೆ ಪ್ರದೇಶಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕವರ್ಡ್ ಕೇಬಲ್ ಕಂಡಕ್ಟರ್ ಮತ್ತು ಸ್ಪನ್ ಪೋಲ್ ಡಿಎಸಿ ಅಳವಡಿಸುವ ಕಾಮಗಾರಿಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಪಟ್ಟಣದಲ್ಲಿ ಹಳೆಯದಾಗಿರುವ ತಂತಿಗಳಿಂದ ಆಗುತ್ತಿರುವ ಅವಘಡಗಳನ್ನು ತಪ್ಪಿಸಲು ಹಾಗೂ ನಿರಂತರ ವಿದ್ಯುತ್ ಪೂರೈಕೆಗಾಗಿ 4.33 ಕೋಟಿ ರೂ.ಗಳ ವೆಚ್ಚದಲ್ಲಿ ಕವರ್ಡ್ ಬಲ್ ಅಳವಡಿಸಲಾಗುತ್ತಿದೆ.
ಇದರಿಂದ ಮಳೆಗಾಲದಲ್ಲಿ ತಂತಿ ತುಂಡಾಗಿ ಬೀಳುವ, ಕಾರ್ಟ್ ಸರ್ಕ್ಯೂಟ್ ಆಗುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು. ಅಥಣಿ ಪಟ್ಟಣದ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಹಳೆಯ ತಂತಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು ಈಗ ಕವರ್ಡ್ ಕೇಬಲ್ ಅಳವಡಿಕೆಯಿಂದವಿದ್ಯುತ್ ನಷ್ಟ ಕಡಿಮೆಯಾಗಿ ಗುಣಮಟ್ಟದ ಪೂರೈಕೆಯಾಗಲಿದೆ. ವಿದ್ಯುತ್ ಮಳೆಗಾಲದ ಸಮಯದಲ್ಲಿ ವಿದ್ಯುತ್ ವ್ಯತ್ಯಯ ವಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶೀವಲೀಲಾ ಬುಟಾಳಿ, ಉಪಾದ್ಯಕ್ಷೆ ಭುವನೇಶ್ವರ ಯಕ್ಕಂಚಿ. ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಪರ್, ಡಾ. ಮಲ್ಲಿಕಾರ್ಜುನ ಹಂಜಿ. ಪುರಸಭೆ ಸದಸ್ಯರಾದ ರಾಜಶೇಖರ ಗುಡೊಡಗಿ, ಸೈಯದ್ ಅಮಿನ್ ಗದ್ಯಾಳ, ಪ್ರಮೋದ ಬಿಳ್ಳೂರ, ಮಲ್ಲಿಕಾರ್ಜುನ ಬುಟಾಳಿ, ಮುಖಂಡರಾದ ರಾಜು ಬುಲಬುಲೆ, ಬಾಬು ಖೇಮಲಾಪೂರ, ಶಿವು ನಾಯಿಕ. ರಾಜು ಆಲಬಾಳ, ಗುತ್ತಿಗೆದಾರರಾದ ಸಂಗಮೇಶ ನಾರಗೊಂಡ, ಅಮೀರ ಖತೀಬ, ಶಿವಲಿಂಗ ಕೊಕಳೆ, ದ್ವಾರಕೀಶ ಜಾಲಿಹಾಳ, ಹೆಸ್ಕಾಂ ಇಲಾಖೆಯ. ಜಿ ವಿ ಸಂಪನ್ನವರ, ಗುರುಸ್ವಾಮಿ ಶಬ್ಬಿರ್ ಪಾರ್ಥನಹಳ್ಳಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 