ಅಂತರರಾಷ್ಟ್ರೀಯ

ಬ್ರೆಜಿಲ್ : 24 ಗಂಟೆಯಲ್ಲಿ 3 ಸಾವಿರ ಹೊಸ ಕರೋನ ಸಾವು ಪ್ರಕರಣ ದಾಖಲು

ಬ್ರೆಜಿಲ್ : 24 ಗಂಟೆಯಲ್ಲಿ 3 ಸಾವಿರ ಹೊಸ ಕರೋನ ಸಾವು ಪ್ರಕರಣ ದಾಖಲು

ಸಾವೊ ಪಾಲೊ, ಎಪ್ರಿಲ್ 24: ಬ್ರೆಜಿಲ್ ನಲ್ಲಿ  ಶುಕ್ರವಾರ  ಕೇವಲ  24 ಗಂಟೆಗಳಲ್ಲಿ 2,914 ಹೊಸ ಕರೋನ ಸಾವಿನ ಪ್ರಕರಣ ವರದಿಯಾಗಿದೆ.

ಇದರ ಪರಿಣಾಮ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ  3ಲಕ್ಷದ 86ಸಾವಿರ ಮೀರಿದೆ.  ಕಳೆದ 24 ಗಂಟೆಗಳಲ್ಲಿ 69,105 ಹೊಸ ಕರೋನ  ಪ್ರಕರಣಗಳು ಪತ್ತೆಯಾಗಿದೆ. ಎಂದು  ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ವಾರದಲ್ಲಿ 14 ರಾಜ್ಯಗಳು ಮತ್ತು ರಾಜಧಾನಿ ಬ್ರೆಸಿಲಿಯಾ 90% ರಷ್ಟು ತೀವ್ರ ನಿಗಾ ಘಟಕಗಳನ್ನು (ಐಸಿಯು) ನೋಂದಾಯಿಸಿಕೊಂಡಿದೆ ಎಂದು ಬ್ರೆಜಿಲ್‌ನ ಸರ್ಕಾರಿ ವೈದ್ಯಕೀಯ ಸಂಶೋಧನಾ ಕೇಂದ್ರವಾದ ಓಸ್ವಾಲ್ಡೋ ಕ್ರೂಜ್ ಫೌಂಡೇಶನ್ (ಫಿಯೋಕ್ರಜ್) ವರದಿ ಮಾಡಿದೆ., ಕಳೆದ ಎರಡು ವಾರಗಳಲ್ಲಿಕರೋನ  ಸಾವಿನ ಪ್ರಮಾಣ ಬಹಳ ಹೆಚ್ಚಾಗಿದೆ. 

ಬ್ರೆಜಿಲ್‌ನ ಪ್ರಮುಖ ಪ್ರವಾಸಿ ತಾಣವಾದ ರಿಯೊ ಡಿ ಜನೈರೊದಲ್ಲಿ, ಮೇಯರ್ ಕಚೇರಿಯು ಸೋಮವಾರದಿಂದ ಶುಕ್ರವಾರದವರೆಗೆ ಪಟ್ಟಣದ ಪ್ರಸಿದ್ಧ ಕಡಲತೀರಗಳಿಗೆ ಭೇಟಿ ನೀಡಲು ಜನರಿಗೆ ಅನುಕೂಲವಾಗುವಂತೆ ಲಾಕ್‌ಡೌನ್ ನಿಯಮ ಸಡಿಲಗೊಳಿಸಿದೆ. ಇದರ ಜೊತೆಗೆ ವಾರಾಂತ್ಯದಲ್ಲಿ ಕಡಲತೀರಗಳು ಮುಚ್ಚಲಿದ್ದು, ರಾತ್ರಿಯ ನಿರ್ಬಂಧಗಳು ಎಂದಿನಂತೆ ಮುಂದುವರೆಯಲಿದೆ ಎಂದೂ ಸ್ಪಷ್ಟಪಡಿಸಲಾಗಿದೆ. 

ಸುದ್ದಿ ಓದಿ