ಮೂಡಲಗಿ

ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ

ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ

ಮೂಡಲಗಿ 06: ಮಹಾತ್ಮಾ ಗಾಂಧಿ ಮತ್ತು ಲಾಲ್‌ಬಹಾದ್ದೂರ ಶಾಸ್ತ್ರೀ ಅವರ ಜಯಂತಿ ಅಂಗವಾಗಿ ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನವನ್ನು ಏರಿ​‍್ಡಸಿದ್ದರು. 

ಅತಿಥಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ಗಾಂಧಿ ಅವರ ಮೇಲೆ ಪುಸ್ತಕದ ಪ್ರಭಾವವಾಗಿದ್ದು, ಅವರನ್ನು ಮಹಾತ್ಮ ಎನ್ನುವ ಮಟ್ಟಕ್ಕೆ ಬೆಳೆಸಿದ್ದು ಪುಸ್ತಕದ ಪ್ರಭಾವದಿಂದ  ಎಂದರು. 

ವಿದ್ಯಾರ್ಥಿಗಳು ದೇಶದ ಅನೇಕ ಸಾಧಕರ ಜೀವನ ಚರಿತ್ರೆಯನ್ನು ಓದಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. 

ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಅರ್‌.ಎ. ಶಾಸ್ತ್ರೀಮಠ ಮಾತನಾಡಿ ಪುಸ್ತಕಗಳ ಓದಿನಿಂದ ಜಗತ್ತಿನ ಅನೇಕ ಮಹನೀಯರು ಪ್ರಭಾವಿತರಾಗಿದ್ದು, ಅಂಥ ಅದ್ಭುತವಾದ ಶಕ್ತಿ ಓದುಗಾರಿಕೆ ಇದೆ ಎಂದರು. 

ಪ್ರೊ.ಎಸ್‌.ಜಿ. ನಾಯಿಕ, ಪ್ರೊ. ಎ.ಪಿ. ರಡ್ಡಿ, ಪ್ರೊ. ವಿ.ಆರ್‌. ದೇವರಡ್ಡಿ ಇದ್ದರು.  

ಗ್ರಂಥಪಾಲಕ ಬಸವಂತ ಬರಗಾಲಿ ಸ್ವಾಗತಿಸಿದರು, ಮನೋಹರ ಲಮಾಣಿ ವಂದಿಸಿದರು. 


ಸುದ್ದಿ ಓದಿ