ಅಂತರರಾಷ್ಟ್ರೀಯ

ನೈಜೀರಿಯಾದಲ್ಲಿ ದೋಣಿ ಮುಳಗಿ 30 ಜನ ಸಾವು

ನೈಜೀರಿಯಾದಲ್ಲಿ ದೋಣಿ ಮುಳಗಿ 30 ಜನ ಸಾವು

ಅಬುಜಾ, ಮೇ 10: ಮಧ್ಯ ನೈಜೀರಿಯಾದ ನೈಜರ್ ರಾಜ್ಯದಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. 

ರಾಜ್ಯದ ಪೂರ್ವ ಭಾಗದ ಶಿರೊರೊ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ದುರಂತ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ನ್ಯಾನ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ. 

ಘಟನೆ ಜರುಗಿದ ಸಮಯದಲ್ಲಿ ದೋಣಿಯಲ್ಲಿ 100 ಪ್ರಯಾಣಿಕರಿದ್ದರು.   ದೋಣಿ ಮರಕ್ಕೆ ಬಡಿದು ನಂತರ ಮುರಿದು ಬಿದ್ದಿದೆ ಎಂದೂ  ವರದಿಯಾಗಿದೆ. ಸ್ಥಳೀಯ ತುರ್ತು ಸೇವಾ ಸಿಬ್ಬಂದಿ 65 ಜನರನ್ನು ರಕ್ಷಣೆ ಮಾಡಿವೆ ಸದ್ಯ ಈವರೆಗೆ , 28 ಶವಗಳನ್ನು ಹೊರ ತೆಗೆಯಲಾಗಿದ್ದು,  ಇನ್ನೂ 7 ಜನರು ಕಾಣೆಯಾಗಿದ್ದಾರೆ.  ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. 

ಸುದ್ದಿ ಓದಿ