ಹುಬ್ಬಳ್ಳಿಯಲ್ಲಿ ರಕ್ತ ದಾನ ಶಿಬಿರ ಕಾರ್ಯಕ್ರಮ
Blood donation camp program in Hubballi
ಹುಬ್ಬಳ್ಳಿ 30: ಗಣರಾಜ್ಯೋತ್ಸವ ಶುಭ ಸಂಭ್ರಮದಲ್ಲಿ ವಿದ್ಯಾನಗರದ ಅಶೋಕ್ ಸೂಪರ್ ಸ್ಪೆಷಾಲಿಟಿ ಮತ್ತು ಕಣ್ಣಿನ ಆಸ್ಪತ್ರೆಯಲ್ಲಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಅವರ 92 ನೇ ಜನ್ಮ ದಿನೋತ್ಸವ ನಿಮಿತ್ತ ರಕ್ತ ದಾನ ಶಿಬಿರ ಕಾರ್ಯಕ್ರಮ ಆಯೋಜಿಸಿದ್ದರು. ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ, ಐ.ಎಂ.ಎ. ಹುಬ್ಬಳ್ಳಿ ಮಹಿಳಾ ಘಟಕದ ಕಾರ್ಯದರ್ಶಿ, ನೇತ್ರ ತಜ್ಞ ವೈದ್ಯರಾದ ಡಾ. ವರ್ಷಾ ಬಂಗಾರಶೆಟ್ಟರ್, ಹಾಗೂ ಖ್ಯಾತ ವೈದ್ಯರಾದ ಡಾ. ಅಶೋಕ್ ಬಂಗಾರಶೆಟ್ಟರ್ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು , ಗ್ರಂಥ ನೀಡಿ, ಮಾಲಾರೆ್ಣ ಮಾಡಿ ಆತ್ಮೀಯವಾಗಿ, ಹೃದಯಪೂರ್ವಕವಾಗಿ, ಗೌರವದಿಂದ ಸನ್ಮಾನಿಸಿದರು.
ಹಿರಿಯರಾದ ಮಹೇಶ್ ಬೊಮ್ಮಾಯಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ , ಸಾಹಿತಿ ಪ್ರೊ ಎಸ್.ಎಂ. ಸಾತ್ಮಾರ್, ಐ.ಎಂ.ಎ ಹುಬ್ಬಳ್ಳಿ ಘಟಕದ ಮಾಜಿ ಅಧ್ಯಕ್ಷ ಡಾ. ವಿ.ಬಿ.ನಿಟಾಲಿ, ಸೋಹನ್ ಸುರೇಶ್ ಹೊರಕೇರಿ, ಸುಜಯ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಪ್ರೇಮ ಬಿಂದು ರಕ್ತ ಕೇಂದ್ರದ ವಿ.ಎಂ.ಹಿರೇಮಠ, ಬಿಂದು , ಮನೀಷ್, ಚನ್ನಬಸಪ್ಪ ಧಾರವಾಡಶೆಟ್ಟರ್, ವಿ. ಜಿ.ಪಾಟೀಲ, ಮುಂತಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 