ಸ್ವಾತಂತ್ರ್ಯ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ: ಡಾ.ಎಸ್.ಎಮ್.ಗಂಗಾಧರಯ್ಯ
ಯಮಕನಮರಡಿ :ಸಮೀಪದ ಪಾಶ್ಚಾಪೂರ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ, ಬೆಳಗಾವಿ, ರಾಣಿ ಚೆನ್ನಮ್ಮಾ ಅಧ್ಯಯನ ಪೀಠ ಬೆಳಗಾವಿ ಮತ್ತು ಕನ್ನಡ ಕಲ್ಪವೃಕ್ಷ ಸಂಘ ವಿಭಾಗದ ಸಹಯೋಗದಲ್ಲಿ 2023-24ನೇ ಸಾಲಿನ ವಿಶೇಷ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಪ್ರದೀಪಗಳಲ್ಲಿ ವೀರರಾಣಿ ಚೆನ್ನಮ್ಮಳ ಇತಿವೃತ್ತಗಳು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಭಾಷಾ ಶಾಸ್ತ್ರೀಯ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೋ. ಎಸ್.ಎಮ್. ಗಂಗಾಧರಯ್ಯ ಅವರು ವಹಿಸಿ ಮಾತನಾಡುತ್ತಾ ಸ್ವಾತಂತ್ರ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸುರೇಶ ಹನಗಂಡಿ ಅವರು ತ್ರಿಪದಿಗಳು, ಜಾನಪದ, ಜೀವನಾಡಿಗಳಾಗಿದ್ದು ಗ್ರಾಮೀಣ ತ್ರಿಪದಿಗಳಲ್ಲಿ ಚೆನ್ನಮ್ಮಾಜಿ ಇತಿಹಾಸವೇ ಅಡಗಿದೆ ಎಂದು ಹೇಳಿದರು. ಸರ್ವರನ್ನು ಸ್ವಾಗತಿಸಿ ಮಾತನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಆಶಾ ರೆಡ್ಡಿ ಕಿತ್ತೂರು ಚೆನ್ನಮ್ಮಾ ಎಲ್ಲರಿಗೂ ಸ್ಪೂರ್ತಿಯ ನೆಲೆಯಾಗಿದ್ದಾಳೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರ.ಪ್ರಾಂಶುಪಾಲರಾದ ಆನಂದ ಎನ್. ವಿವಿಧ ವಿಭಾಗದ ಅಧ್ಯಾಪಕ ವರ್ಗ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕ ಸಂತೋಷ ಗುಂಡಾಡಿ, ನಿರೂಪಿಸಿದರು, ನೀಲಕಂಠ ಬೋಮಣ್ಣವರ ಅತಿಥಿಗಳನ್ನು ಪರಿಚಯಿಸಿ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೋ. ಶ್ರೀಶೈಲ ಬಬಲಾದ ಅವರು ವಂದಿಸಿದರು.