ಬೆಳಗಾವಿಗರು ತೋರಿದ ಪ್ರೀತಿಗೆ ನಾನು ಚಿರಋಣಿ : ನಿಮ್ಮ ಪ್ರೀತಿಯ ಋಣವನ್ನು ಬಡ್ಡಿ ಸಮೇತವಾಗಿ ತೀರಿಸುವೆ : ಪ್ರಧಾನಿ ಮೋದಿ ಬೆಳಗಾವಿಗೆ ಅಭಯ
ಬೆಳಗಾವಿ : ಬೆಳಗಾವಿಯ ಜನರು ನನ್ನ ರೋಡ್ ಶೋದಲ್ಲಿ ನೀಡಿದ ಪ್ರೀತಿಗೆ ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಚಿರಋಣಿ. ಬೆಳಗಾವಿಗರ ಈ ಋಣವನ್ನು ನಾನು ಬಡ್ಡಿ ಸಮೇತ ತೀರಿಸುವದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಲ್ಲಿ ಹೇಳಿದರು.

ಬೆಳಗಾವಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೇರವೇರಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಗರದಲ್ಲಿ 11 ಕಿಮೀ ರೋಡ್ ಶೋ ನಡೆಸಿದ ಬಳಿಕ ವೇದಿಕೆಯಲ್ಲಿ ಮೊದಲಿಗೆ ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದ ಪ್ರಧಾನಿ ಮೋದಿ ಅವರು, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಮಂತ್ರಕ್ಕೆ ಸ್ಪೂರ್ತಿ ಯಾದ ಭಗವಾನ್ ಬಸವೇಶ್ವರರ ಅವರಿಗೆ ನಮಸ್ಕಾರಗಲು, ವೀರ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಭೂಮಿಗೆ ನನ್ನ ಪ್ರಣಾಮಗಳು, ಬೆಳಗಾವಿಯ ಕುಂದಾ ಮತ್ತು ಬೆಳಗಾವಿಯ ಜನರ ಪ್ರೀತಿ ಇವೇರಡು ಮರೆಯಲಾಗದ ಸಿಹಿ, ಬೆಳಗಾವಿಯ ನನ್ನ ಬಂಧು ಬಗಿನೀಯರಿಗೆ ನಮಸ್ಕಾರ್ ಗಲು ಎಂದು ಹೇಳಿದರು.
ಬೆಳಗಾವಿಗರು ಇಂದು ಇಲ್ಲಿ ನನಗೆ ನೀಡಿದ ಪ್ರೀತಿಗೆ ಹಗಲು ರಾತ್ರಿ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗಿದೆ ಎಂದರು. ಬೆಳಗಾವಿಗೆ ಬರುವದು ಯಾವ ತೀರ್ಥಯಾತ್ರೆ ಕಿಂತ ಕಡಿಮೆ ಇಲ್ಲ. ಚನ್ನಮ್ಮ ರಾಯಣ್ಣನ ನಾಡಿಗೆ ಬರುವದು ನನಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಡಬಲ್ ಇಂಜಿನ್ ಸರಕಾರಗಳು ಬೆಳಗಾವಿಯನ್ನು ಇನ್ನು ಹೆಚ್ಚಿನ ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಯತ್ನ ಮಾಡುತ್ತವೆ. ಸದ್ಯ ಸಾವಿರಾರು ಕೋಟಿ ಯೋಜನೆಗಳ ಕಾಮಗಾರಿಗಳು ಇಲ್ಲಿ ಈಗ ನಡೆಯುತ್ತಿದ್ದು, ಈ ಕ್ಷೇತ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಬೆಳಗಾವಿ ನಗರವನ್ನು ದೇಶದ ಇನ್ನೂಳಿದ ನಗರಗಳಿಗೆ ಜೋಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನರೇಂದ್ರ ಸಿಂಗ್ ತೋಮರ, ಸಂಸದರಾದ ಮಂಗಳಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಸಚಿವರಾದ ಗೋವಿಂದ ಕಾರಜೋಳ, ಬಿಸಿ ಪಾಟೀಲ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅಭಯ್ ಪಾಟೀಲ, ಪಿ.ರಾಜೀವ, ಮಹೇಶ ಕಮಠಳ್ಳಿ, ಲಕ್ಷಣ ಸವದಿ, ಅನಿಲ ಬೆನಕೆ, ಮಹದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ, ದುರ್ಯೋಧನ ಐಹೊಳೆ, ಶ್ರೀಮಂತ ಪಾಟೀಲ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಮ್.ಜಿ.ಹಿರೇಮಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.