ಬೆಳಗಾವಿ ಪಾಲಿಕೆ ಚುನಾವಣೆ : 2 ನಿಮಿಷ ತಡವಾಗಿ ಬಂದ 3 ನಗರಸೇವಕರಿಗೆ ಒಳಪ್ರವೇಶಕ್ಕೆ ನಿಷೇಧ : ಮೂವರಿಂದ ಪ್ರತಿಭಟನೆ
ಬೆಳಗಾವಿ, ಫೆ, 6 : ಸೋಮವಾರ ಮಧ್ಯಾಹ್ನ ನಡೆದ ಬೆಳಗಾವಿ ಮಹಾಪೌರ ಚುನಾವಣೆ ವೇಳೆಯಲ್ಲಿ ಮೂವರು ನಗರಸೇವರು ಎರಡು ನಿಮಿಷ ತಡವಾಗಿ ಬಂದ ಹಿನ್ನೆಲೆಯಲ್ಲಿ ಬಾಗಿಲು ಬಂದಾಗಿತ್ತು. ಮೂವರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಸಭಾಂಗಣ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆಯಿತು.
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪಾಲಿಕೆ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿಗಳಾದ ಎಮ್.ಜಿ. ಹಿರೇಮಠ ಅವರು ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಭಾಂಗಣ ಬಾಗಿಲು ಬಂದ್ ಮಾಡಿಸುವ ಮೂಲಕ ಮಹಾಪೌರ ಚುನಾವಣೆ ಪ್ರಕ್ರಿಯೆ ಪ್ರಾರಂಭ ಮಾಡಿದರು.
ಬಾಗಿಲು ಬಂದಾಗಿ ಎರಡು ನಿಮಿಷದಲ್ಲಿ ಸಭಾಂಗಣ ಬಾಗಿಲ ಮುಂದೆ ಬಂದ ಮೂವರು ನಗರಸೇವಕರಾದ ಸುಹೇಲ್ ಸಂಗೊಳ್ಳಿ ಹಾಗೂ ಖರ್ಷಿದ ಮುಲ್ಲಾ ಮತ್ತು ಝರೀನಾ ಖಾನ್ ಇವರನ್ನು ಪೊಲೀಸರು ಬಾಗಿಲ ಬಳಿ ತಡೆದರು. ಈ ಹಿನ್ನೆಲೆಯಲ್ಲಿ ಮೂವರು ನಗರಸೇವಕರು ಬಾಗಿಲು ಮುಂದೆ ಕುಳಿತು ಕೆಲಹೊತ್ತು ಪ್ರತಿಭಟನೆ ನಡೆಸಿದರು.