ಬ್ರಿಟನ್ ನಲ್ಲಿ ಜುಲೈ 19 ರವರೆಗೂ ಲಾಕ್ ಡೌನ್ ವಿಸ್ತರಣೆ: ಪ್ರಧಾನಿ
ಲಂಡನ್ , ಜೂನ್ 15: ಬ್ರಿಟನ್ ನಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖವಾಗುತ್ತಿದ್ದರೂ ಇದರ ಜೊತೆಗೆ ಮೂರನೇ ಅಲೆ ಭೀತಿಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಜುಲೈ 19 ರವರೆಗೂ ಲಾಕ್ ಡೌನ್ ಮುಂದುವರೆಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಬ್ರಿಟನ್ನಲ್ಲಿ ವಿಧಿಸಲಾಗಿರುವ ಲಾಕ್ಡೌನ್ ನಿರ್ಬಂಧಗಳನ್ನು ನಾಲ್ಕು ವಾರಗಳ ತಡವಾಗಿ ಅಂದರೆ ಮುಂದಿನ ತಿಂಗಳ 19ಕ್ಕೆ ತೆರವುಗೊಳಿಸಲಾಗುವುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಕಟಿಸಿದ್ದಾರೆ.ಈ ಮೊದಲು ಜೂನ್ 21ಕ್ಕೆ ಲಾಕ್ಡೌನ್ ನಿರ್ಬಂಧ ತೆರವುಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ರೂಪಾಂತರ ಕೊರೊನಾ ಸೋಂಕು ಮರುಕಳಿಸುವ ಸಾಧ್ಯತೆಯಿದೆ ಎಂಬ ವಿಜ್ಞಾನಿಗಳು ವರದಿ ಹಿನ್ನಲೆಯಲ್ಲಿ ಜುಲೈ 19ರ ತನಕ ಲಾಕ್ಡೌನ್ ನಿರ್ಬಂಧ ಮುಂದುವರಿಸಲಾಗಿದೆ.