ಅಂತರರಾಷ್ಟ್ರೀಯ

ಬ್ರೆಜಿಲ್: ಒಂದೇ ದಿನ ಕೊರೋನ ಸೋಂಕಿಗೆ 3 ಸಾವಿರ ಜನ ಬಲಿ

ಬ್ರೆಜಿಲ್:  ಒಂದೇ ದಿನ ಕೊರೋನ ಸೋಂಕಿಗೆ 3 ಸಾವಿರ ಜನ ಬಲಿ

ಬ್ರಿಟಾಸಿಲಿಯಾ, ಎಪ್ರಿಲ್ 14 : ಬ್ರೆಜಿಲ್ ಕಳೆದ 24 ಗಂಟೆಗಳಅವಧಿಯಲ್ಲಿ  ಕೊರೊನಾ ಸೋಂಕಿಗೆ  3,808 ಜನ ಮೃತಪಟ್ಟಿದ್ದಾರೆ.  ಪರಿಣಾಮ ಈ ವರೆಗೂ  ದೇಶದಲ್ಲಿ ಮೃತರ ಸಂಖ್ಯೆ  3ಲಕ್ಷದ 58,425 ಕ್ಕೆ ಏರಿಕೆಯಾಗಿದೆ ಎಂದು  ಆರೋಗ್ಯ ಸಚಿವಾಲಯದ ವರದಿ ಹೇಳಿದೆ. ಇದೇ  ಅವಧಿಯಲ್ಲಿ,  82,186 ಹೊಸ ಸೋಂಕು  ಪ್ರಕರಣಗಳು  ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ  13,599,994 ಕ್ಕೆ ಏರಿಕೆಯಾಗಿದೆ. ಕಳೆದ 7 ದಿನಗಳಲ್ಲಿ ದೈನಂದಿನ ಸರಾಸರಿ 3,068 ಸಾವುಗಳು ವರದಿಯಾಗಿದ್ದು,  ಆರೋಗ್ಯ ಕಾರ್ಯದರ್ಶಿಗಳ ಪ್ರಕಾರ  ಅಮೆರಿಕ ನಂತರ ಬ್ರೆಜಿಲ್ ವಿಶ್ವದ ಎರಡನೇ ಅತಿದೊಡ್ಡ ಸಾಂಕ್ರಾಮಿಕ ಸಾವಿನ ಸಂಖ್ಯೆಯನ್ನು  ದಾಖಲು ಮಾಡಿದ ರಾಷ್ಟ್ರವಾಗಿದೆ. 


ಸುದ್ದಿ ಓದಿ