ಕೊರೋನ ಸೋಂಕು ಪ್ರಕರಣ: ಬ್ರೆಜಿಲ್ ಗೆ ಎರಡನೆ ಸ್ಥಾನ
ಬ್ರೆಸಿಲಿಯಾ, ಮಾರ್ಚ್ 13:ಬ್ರೆಜಿಲ್ ನಲ್ಲಿ ದೃಡಪಡಿಸಿದ ಕರೋನ ಸೋಂಕಿನ ಹೊಸ ಅಲೆ ಹೆಚ್ಚಾಗಿ ಪರಿಣಾಮ ಸಾವಿನ ಸಂಖ್ಯೆಯೂ ಹೆಚ್ಚಾಗಿ ಜಾಗತಿಕವಾಗಿ ಸದ್ಯ ಎರಡನೇ ಸ್ಥಾನ ಪಡೆದಿದೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ವಿಶ್ವದಲ್ಲಿ ಬ್ರೆಜಿಲ್ ಈಗ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಈವರಗೆ ಕೊರೋನದಿಂದ ಸಾವನ್ನಪ್ಪಿದವರ ಸಂಖ್ಯೆ 2 ಲಕ್ಷ 75,ಸಾವಿರ ದಾಟಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ, ಲ್ಯಾಟಿನ್ ಅಮೆರಿಕನ್ ದೇಶದಲ್ಲಿ 85,663 ಹೊಸ ಕೊರೋನ ಪ್ರಕರಣಗಳು ದಾಖಲಾಗಿದೆ. ಅಮೆರಿಕ ನಂತರ ಬ್ರೆಜಿಲ್ ಹೆಚ್ಚು ಕೊರೋನ ರೋಗಿಗಳನ್ನು ಹೊಂದಿರುವ, ಅತಿ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಅದೇ ಅವಧಿಯಲ್ಲಿ, ಬ್ರೆಜಿಲ್‌ನ ಕರೋನವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 2,216 ರಿಂದ 2ಲಕ್ಷದ 75ಸಾವಿರ ದಾಟಿ ಹೋಗಿದೆ ಎಂದೂ ಸಚಿವಾಯಲದ ವರದಿ ಹೇಳಿದೆ.