ಅಂತರರಾಷ್ಟ್ರೀಯ

ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟ, 12 ಯೋಧರ ಸಾವು

ಸೊಮಾಲಿಯಾದಲ್ಲಿ  ಬಾಂಬ್  ಸ್ಫೋಟ,  12 ಯೋಧರ  ಸಾವು

ಮೊಗಾಡಿಶು, ಫೆ 8 : ಸೊಮಾಲಿಯಾದಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟದಲ್ಲಿ ಧುಸಮರೀಬ್‌ನ ಗುಪ್ತಚರ ಸಂಸ್ಥೆ ಮುಖ್ಯಸ್ಥರು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಇತರೆ ಹಲವು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸೆಂಟ್ರಲ್ ಸೊಮಾಲಿಯಾದ ಧುಸಮರೆಬ್ ಪಟ್ಟಣದ ಹೊರಗೆ ಭದ್ರತಾ ಸಿಬ್ಬಂದಿಯನ್ನು ಹೊತ್ತ ವಾಹನದ ಮೇಲೆ  ದಾಳಿ  ಮಾಡಲಾಗಿದೆ. ಮೃತಪಟ್ಟವರಲ್ಲಿ  ಧುಸಮರೀಬ್‌ನ ಗುಪ್ತಚರ ಸಂಸ್ಥೆ ಮುಖ್ಯಸ್ಥ ಅಬ್ದುರಾಶಿದ್ ಅಬ್ದುನೂರ್ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಲ್-ಖೈದಾ-ಸಂಬಂಧಿತ ಸಶಸ್ತ್ರ ಗುಂಪು, ಅಲ್-ಶಬಾಬ್ ದಾಳಿಯ ಹೊಣೆ  ಹೊತ್ತುಕೊಂಡಿದೆ.ಸದ್ಯ  ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು  ತನಿಖೆ ನಡೆಯುತ್ತಿದೆ. ಅಲ್-ಶಬಾಬ್ ಉಗ್ರರು ರಾಷ್ಟ್ರ ರಾಜಧಾನಿ ಮೊಗಾಡಿಶುವಿನ ಹೋಟೆಲ್‌ಗೆ ಪ್ರವೇಶಿಸಿ ಐವರನ್ನು  ಕೊಂದ ಒಂದು ವಾರದ ಬಳಿಕ ಈ ದಾಳಿ ನಡೆದಿದೆ. ಸೋಮವಾರ ನಡೆಯಲಿರುವ ಚುನಾವಣೆಯ ಬಗ್ಗೆ ಚರ್ಚಿಸಲು ದೇಶದ ರಾಜಕೀಯ ಮುಖಂಡರು ಧುಸಮರೀಬ್ ಪಟ್ಟಣದಲ್ಲಿ ಜಮಾಯಿಸಿದ್ದಾರೆ. 


ಸುದ್ದಿ ಓದಿ