ಅಂತರರಾಷ್ಟ್ರೀಯ

ಬಾಂಬ್ ಸ್ಫೋಟ, ವೆನಿಜುವೆಲ ಸೈನಿಕರ ದಾರುಣ ಸಾವು

ಬಾಂಬ್ ಸ್ಫೋಟ,   ವೆನಿಜುವೆಲ  ಸೈನಿಕರ  ದಾರುಣ ಸಾವು

ಕ್ಯಾರಕಾಸ್, ಎಪ್ರಿಲ್ 2:ರಾಷ್ಟ್ರೀಯ ಗಡಿಯಲ್ಲಿ  ಕೊಲಂಬಿಯಾದ ಉಗ್ರಗಾಮಿ ವಿರುದ್ಧದ ಕಾರ್ಯಾಚರಣೆಯಲ್ಲಿ ನೆಲ ಬಾಮಬ್ ಸ್ಫೋಟ ದುರಂತದಲ್ಲಿ  ಇಬ್ಬರು ವೆನಿಜುವೆಲಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವ ವ್ಲಾಡಿಮಿರ್ ಪಡ್ರಿನೊ ಹೇಳಿದ್ದಾರೆ."ಹಿರಿಯ ಸಾರ್ಜೆಂಟ್ ಆಂಡ್ರಿಯಲ್ ಇಸ್ತುರಿಜ್ ಸೊಜೊ ಮತ್ತು ಕಿರಿಯ ಸಾರ್ಜೆಂಟ್ ಜೀಸಸ್ ಅಲೆಕ್ಸಾಂಡರ್ ವಾಸ್ಕ್ವೆಜ್ ಪೆರೆಜ್ ಅವರುಗಳು  ಮೃತಪಟ್ಟಿದ್ದಾರೆ  ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಇತರೆ 9  ಸೈನಿಕರು ಗಾಯಗೊಂಡರು. ಅವರೆಲ್ಲರನ್ನು  ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಗಡಿ ಪ್ರದೇಶದಿಂದ ಉಗ್ರರನ್ನು ಹೊರಗಟ್ಟುವ  ಪ್ರಯತ್ನವಾಗಿ  ವೆನಿಜುವೆಲಾದ ಸರ್ಕಾರ  ಮಾರ್ಚ್ 21 ರಂರಿಂದ ಪಶ್ಚಿಮ ರಾಜ್ಯವಾದ ಅಪುರೆನಲ್ಲಿ ಆಪರೇಷನ್ ಬೊಲಿವೇರಿಯನ್ ಶೀಲ್ಡ್  ಕಾರ್ಯಾಚರಣೆ  ಪ್ರಾರಂಭಿಸಿದೆ. 



ಸುದ್ದಿ ಓದಿ