ಬಲೂಚಿಸ್ತಾನದಲ್ಲಿ ಸ್ಫೋಟ: 4 ಸಾವು , 12 ಮಂದಿಗೆ ಗಾಯ
ಇಸ್ಲಾಮಾಬಾದ್, ಎಪ್ರಿಲ್ 22 :ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಹೋಟೆಲ್ ನ ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು, ಇತರೆ ತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆರೆನಾ ಹೋಟೆಲ್ ನಲ್ಲಿ ನಡೆದ ಬಾಂಬ್ ಸ್ಫೋಟದ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನೈರುತ್ಯ ಬಲೂಚಿಸ್ತಾನ ಪ್ರಾಂತ್ಯವು ಬಲೂಚಿಸ್ತಾನ ವಿಮೋಚನಾ ರಂಗ ಮತ್ತು ಬಲೂಚಿಸ್ತಾನ ವಿಮೋಚನಾ ಸೇನೆಯಂತಹ ಪ್ರತ್ಯೇಕತಾವಾದಿ ಗುಂಪುಗಳ ದೀರ್ಘಕಾಲದ ಬಂಡಾಯದ ತಾಣವಾಗಿದ್ದು, ದಶಕಗಳಿಂದ ತಮ್ಮ ಸ್ವಾತಂತ್ರ್ಯದ ಬೇಡಿಕೆಗಳ ಈಢೇರಿಕೆಕೆಗಾಗಿ ದಾಳಿ ನಡೆಸುತ್ತಿದ್ದಾರೆ. ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು, 12ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಆರೋಗ್ಯ ಇಲಾಖೆಯ ವಕ್ತಾರ ವಾಸಿಮ್ ಬೆಗ್ ತಿಳಿಸಿದ್ದಾರೆ.