ಅಂತರರಾಷ್ಟ್ರೀಯ

ಈಕ್ವಟೋರಿಯಲ್ ಗಿನಿಯಾದಲ್ಲಿ ಸರಣಿ ಸ್ಫೋಟ: ಸಾವಿನ ಸಂಖ್ಯೆ 98 ಕ್ಕೆ ಏರಿಕೆ

ಈಕ್ವಟೋರಿಯಲ್ ಗಿನಿಯಾದಲ್ಲಿ ಸರಣಿ  ಸ್ಫೋಟ:  ಸಾವಿನ ಸಂಖ್ಯೆ 98 ಕ್ಕೆ ಏರಿಕೆ

ಮಲಬೊ, ಮಾರ್ಚ್ 9 :ಬಂದರು ನಗರಿ  ಬಾಟಾದಲ್ಲಿನ  ಮಿಲಿಟರಿ ನೆಲೆಗಳ ಮೇಲೆ ಸಂಭವಿಸಿದ  ಸರಣಿ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 98 ಕ್ಕೆ ಏರಿಕೆಯಾಗಿದೆ. ಈ ದುರ್ಘಟನೆಯಲ್ಲಿ  ಗಾಯಗೊಂಡವರ ಸಂಖ್ಯೆ 615 ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಉಪಾಧ್ಯಕ್ಷ ಟಿಯೊಡೊರೊ ನ್ಗುಮಾ ಒಬಿಯಾಂಗ್ ಮಾಂಗ್ಯೂ ಅವರ ಹೇಳಿಕೆಯ ಪ್ರಕಾರ . ಹಲವು ಸರಣಿ ಸ್ಫೋಟಗಳು ಭಾನುವಾರ ಬಾಟಾದಲ್ಲಿನ ಮಿಲಿಟರಿ ನೆಲೆಯನ್ನು ಅಪ್ಪಳಿಸಿದ್ದು, ಬಹುತೇಕ ಎಲ್ಲಾ ಕಟ್ಟಡಗಳು  ನಾಶಪಡಿಸಿದೆ ಅಥವಾ ಹಾನಿಗೊಳಿಸಿದೆ. ಸೈನಿಕರ "ನಿರ್ಲಕ್ಷ್ಯ" ಮತ್ತು ಸೇನಾ ಗೋದಾಮುಗಳ ಬಳಿ ಬೆಂಕಿ ಹೊತ್ತಿಸಿದ ರೈತರ ಅಜಾಗರೂಕತೆಯಿಂದ  ಸ್ಫೋಟಗಳು ಸಂಭವಿಸಿವೆ ಎಂದು ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ ಎಂಬಾಸೊಗೊ ಆರೋಪಿಸಿದ್ದಾರೆ. 


ಸುದ್ದಿ ಓದಿ