ಆಫ್ಘಾನಿಸ್ತಾನದಲ್ಲಿ ಕಾರು ಸ್ಫೋಟ : ಮೃತರ ಸಂಖ್ಯೆ 7 ಕ್ಕೆ ಏರಿಕೆ
ಮಾಸ್ಕೋ, ಮಾರ್ಚ್ 13 :ವಾಯುವ್ಯ ಅಫ್ಘಾನ್ ನಗರ ಹೆರಾತ್‌ನಲ್ಲಿ ಕಾರು ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 50 ಜನರು ಗಾಯಗೊಂಡಿದ್ದಾರೆ ಎಂದು ಪಜ್‌ವೋಕ್ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ. ಇದಕ್ಕೆ ಮೊದಲು ಒಂದು ದಿನ ಮುಂಚಿತವಾಗಿ,ಸಂಭವಿಸಿದ ಸ್ಫೋಟದಿಂದ ಇಬ್ಬರು ಮೃತಪಟ್ಟಿದ್ದರು. ನಗರದ 14 ನೇ ಜಿಲ್ಲೆಯ ಪೊಲೀಸ್ ಠಾಣೆ ಬಳಿ ಸ್ಫೋಟಕ ತುಂಬಿದ ವಾಹನ ಶುಕ್ರವಾರ ಸ್ಫೋಟಗೊಂಡಿದೆ. ಕತಾರಿ ರಾಜಧಾನಿ ದೋಹಾದಲ್ಲಿ ಸರ್ಕಾರ ಮತ್ತು ತಾಲಿಬಾನ್ ಇಸ್ಲಾಮಿಸ್ಟ್ ಚಳವಳಿಯ ಪ್ರತಿನಿಧಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ ಹಿಂಸಾತ್ಮಕ ಘರ್ಷಣೆಗಳು ಮತ್ತು ಬಾಂಬ್ ಸ್ಫೋಟದ ಘಟನೆಗಳು ಅಫ್ಘಾನಿಸ್ತಾನದಲ್ಲಿ ಆಶಾಂತಿ ವಾತವರಣ ಸೃಷ್ಟಿಸುತ್ತಿವೆ.