ಅಂತರರಾಷ್ಟ್ರೀಯ

ಬೇಸಿಗೆ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ : ಅಮೆರಿಕ ಪಣ

ಬೇಸಿಗೆ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ :  ಅಮೆರಿಕ ಪಣ

ವಾಷಿಂಗ್ಟನ್, ಜನವರಿ 27 :ಅಮೆರಿಕದಲ್ಲಿ ಕೊರೋನ ನಿಗ್ರಹಕ್ಕೆ ಹೊಸ ಸರ್ಕಾರ ಸಂಕಲ್ಪ ಮಾಡಿದ್ದು ಬೇಸಿಗೆಯ ಅಂತ್ಯಕ್ಕೆ ದೇಶದ ಜನತೆಗೆ ಲಸಿಕೆ ನೀಡಲು ಹೆಚ್ಚುವರಿಯಾಗಿ 20 ಕೋಟಿ ಲಸಿಕೆಗೆ ಖರೀದಿಗೆ ಸಂಕಲ್ಪ ಮಾಡಿದೆ. ಈ ಬೇಸಿಗೆಯಲ್ಲಿ 600 ಮಿಲಿಯನ್ ಡೋಸ್‌ಗಳನ್ನು ತಲುಪಲು ಮತ್ತು 30 ಕೋಟಿ ಜನರಿಗೆ ಲಸಿಕೆ ನೀಡಲು ಹೆಚ್ಚುವರಿ 200 ಮಿಲಿಯನ್ ಲಸಿಕೆ ಖರೀದಿಸಲು ಬಿಡೆನ್ ಆಡಳಿತವು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಶ್ವೇತಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬಿಡೆನ್-ಹ್ಯಾರಿಸ್ ಆಡಳಿತವು ಎರಡು ಆಹಾರ ಮತ್ತು ಔ ಷಧ ಆಡಳಿತ-ಅಧಿಕೃತವಾಗಿ ಅನುಮೋದನೆ ನೀಡಿದ ಲಕೆಗಳಾದ ಫೈಜರ್ ಮತ್ತು ಮೊಡೆರ್ನಾಗಳಲ್ಲಿ ಪ್ರತಿಯೊಂದರಲ್ಲೂ ಹೆಚ್ಚುವರಿಯಾಗಿ 10 ಕೋಟಿ ಲಸಿಕೆ ಖರೀದಿಸಲಿದೆ.ಬರುವ ಬೇಸಿಗೆಯಲ್ಲಿ ಹೆಚ್ಚು ಜನರಿಗೆ ಲಸಿಕೆ ನೀಡುವ ಗುರಿ ತಲುಪುವ ನಿರೀಕ್ಷೆಯೊಂದಿಗೆ ಬೇಸಿಗೆಯ ಅಂತ್ಯದ ವೇಳೆಗೆ 300 ಮಿಲಿಯನ್ ಅಮೆರಿಕನ್ನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲು ಸಾಕಷ್ಟು ಲಸಿಕೆಗಳನ್ನು ಹೊಂದಿರುತ್ತದೆ ಎಂದೂ ಪ್ರಕಟಣೆ ತಿಳಿಸಿದೆ.


ಸುದ್ದಿ ಓದಿ