ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ: ಪಾರೊತೋಷಕ ವಿತರಣಾ ಸಮಾರಂಭ
B.A. final year students' graduation ceremony: Award distribution ceremony
ಯಮಕನಮರಡಿ 17: ಸ್ಥಳೀಯ ಯಮಕನಮರಡಿ ವಿದ್ಯಾವರ್ಧಕ ಸಂಘದ ಪದವಿ ಕಲಾ ಮಹಾವಿದ್ಯಾಲಯದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಪಾರಿತೋಷಕ ವಿತರಣಾ ಸಮಾರಂಭ ದಿ. 15ರಂದು ಕಾಲೇಜು ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ಸಿ.ಇ.ಎಸ್ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎ. ಬಿ. ನಾಯಿಕರವರು ಆಗಮಿಸಿ ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಮುಖ್ಯವಲ್ಲ, ಅದರ ಜೊತೆಗೆ ನಿಮ್ಮಲ್ಲಿರುವ ಕೌಶಲ್ಯಗಳು, ನೈತಿಕ ಮೌಲ್ಯಗಳು ಮತ್ತು ಸಮಾಜದ ಬಗ್ಗೆ ನಿಮಗಿರುವ ಜವಾಬ್ದಾರಿಗಳು ಅತೀ ಮುಖ್ಯವಾಗುತ್ತವೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿಶೇಷ ಆಮಂತ್ರಿತರಾಗಿ ಸಂಸ್ಥೆಯ ನಿರ್ದೇಶಕರಾದ ಕುಶಾಲಸಿಂಗ್ ರಜಪೂತರವರು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು.
ಯ. ವಿ. ಸಂಘದ ಕಾರ್ಯದರ್ಶಿಗಳುಹಾಗೂ ಉಪನ್ಯಾಸಕರಾದ ಜೆ.ಎನ್.ಅವಾಡೆಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಇಡೀ ಜೀವನದುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವೀಯತೆಯ ಸಾಕಾರ ಮೂರ್ತಿಗಳಾಗಬೇಕು. ನಿಮ್ಮ ಇಂದಿನ ಈ ಯಶಸ್ವಿನ ಹಿಂದೆ ನಿಮ್ಮ ಪೋಷಕರ ತ್ಯಾಗ ಮತ್ತು ಉಪಾಧ್ಯಾಯರ ನಿರಂತರ ಪರಿಶ್ರಮವಿದೆ. ಆದ್ದರಿಂದ ಅವರನ್ನು ಗೌರವಿಸಿ ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಉಪನ್ಯಾಸಕರಾದ ಎಂ.ಬಿ.ಪೂಜೇರಿ ಹಾಗೂ ಕುಮಾರಿ. ಎಸ್.ಪಿ. ಬಾಗೇವಾಡಿಯವರು ವಿದ್ಯಾರ್ಥಿಗಳು ಉಜ್ವಲ ಭವಿಷ್ಯತ್ತನ್ನು ರೂಪಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ಎ. ಎಸ್. ಗುತ್ತಿಯವರು ಮಾತನಾಡುತ್ತಾ ಇಂದಿನ ಈ ಕಾರ್ಯಕ್ರಮ ನಿಮ್ಮ ಹೊಸ ಜೀವನಕ್ಕೆ ನಾಂದಿಯಾಗಿದೆ. ಸಮಾಜಕ್ಕೆ ಒಳ್ಳೆಯ ನಾಗರಿಕರಾಗಿ ನೈತಿಕ ಮೌಲ್ಯಗಳನ್ನು ಎಂದಿಗೂ ಮರೆಯಬೇಡಿ. ನಿಮ್ಮ ಮುಂಬರುವ ಉನ್ನತ ಶಿಕ್ಷಣ ಅಥವಾ ನಿಮ್ಮ ಉದ್ಯೋಗದ ಹಾದಿ ಸದಾ ಯಶಸ್ವಿಯಾಗಲಿ, ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು.
ಇದೇ ಕಾರ್ಯಕ್ರಮದಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ವಿವಿಧ ಘಟಕಗಳ ಅಡಿಯಲ್ಲಿ ಹಾಗೂ ವಾರ್ಷಿಕ ಕ್ರೀಡಾಕೂಟದ ನಿಮಿತ್ಯ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಋತಿಕಾ ಅಲದಾಳಿ ನಿರೂಪಿಸಿದರು. ಪೂಜಾ ದೇಸಾಯಿ ಸ್ವಾಗತಿಸಿದರು. ಶಶಿಕಲಾ ಜಕ್ಕಪ್ಪಗೋಳ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 