ಬೆಂಕಿ ಅನಾಹುತ ಅಪಾಯ ತಡೆಗಟ್ಟುವ ವಿಧಾನಗಳಲ್ಲಿ ಅರಿವು ಕಾರ್ಯಕ್ರಮ
ಬೈಲಹೊಂಗಲ. 17 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ಉಡಿಕೇರಿ- ಮೂಗಬಸವ ಗ್ರಾಮದಲ್ಲಿ ಗ್ರಾಮದೇವಿ ಮತ್ತು ಶ್ರೀಮುಗ ಬಸವೇಶ್ವರ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕುಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು. ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜಕ್ಕನವರ ಇವರು ಸದಸ್ಯರಿಗೆ ಈ ದಿನ ಪ್ರಮುಖ ಇಲಾಖೆಗಳಾದ ಅಗ್ನಿಶಾಮಕ ದಳ ಭೇಟಿ ಮಾಡಿಸಿ ಬೆಂಕಿ ಅನಾಹುತದಿಂದ ಆಗುವ ಅಪಾಯವನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ಕೊಡಿಸಲಾಯಿತು ಮತ್ತು ಪೊಲೀಸ್ ಸ್ಟೇಷನ ಮಹಿಳಾ ದೌರ್ಜನ್ಯ ಕುರಿತು ಸಿಪಿಐ ಎಲಿಗಾರ ಮಾಹಿತಿ ನೀಡಿದರು.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ದೊರಕುವ ಸೌಲಭ್ಯಗಳ ಬಗ್ಗೆ ಸಿಡಿಪಿಓ ಅರುಣ ಕುಮಾರ ಮಾಹಿತಿ ನೀಡಿದರು.ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಹಿಳೆಯರಿಗಾಗಿ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ತಾಲೂಕಿನ ಕೋರ್ಟ್ ಭೇಟಿ ಮಾಡಿ ಮಹಿಳಾ ಹಕ್ಕುಗಳ ಮತ್ತು ಕಾನೂನುಗಳ ಬಗ್ಗೆ ಮಾಹಿತಿ ಸ್ವ ಉದ್ಯೋಗ ಘಟಕ ಭೇಟಿ ಮಾಡಿ ಜೀರೋದಿಂದ ಪ್ರಾರಂಭವಾದ ಚಿಗಳಿ ಪೇಪರ ಬ್ಯಾಗ ಚನುಮರಿ ವ್ಯಾಪಾರಗಳ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಪ್ರೇಮ ಮಂಜುನಾಥ ಸರ್ವ ಸದಸ್ಯರ ಸಮ್ಮುಖದಲ್ಲಿ ಈ ದಿನ ತಾಲೂಕು ಅಧ್ಯಯನ ಪ್ರವಾಸ ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಯಿತು.