ಶಿವರಾತ್ರಿ ಪ್ರಯುಕ್ತ ಬಹಮನಿ ಕೋಟೆಯೊಳಗೆ ಶಿವಲಿಂಗ ಪೂಜೆಗೆ ಯತ್ನ: 30 ಜನರ ಬಂಧನ

ಶಿವರಾತ್ರಿ ಪ್ರಯುಕ್ತ ಬಹಮನಿ ಕೋಟೆಯೊಳಗೆ ಶಿವಲಿಂಗ ಪೂಜೆಗೆ ಯತ್ನ: 30 ಜನರ ಬಂಧನ  Attempt to worship Shivalinga inside Bahmani Fort on the occasion of Shivaratri: 30 people arrested

ಕಲಬುರಗಿ: ಇಲ್ಲಿನ ಬಹಮನಿ ಸುಲ್ತಾನರ ಕೋಟೆಯ ಆವರಣದಲ್ಲಿರುವ ಸ್ವಯಂಭು ಸೋಮೇಶ್ವರ ದೇವಸ್ಥಾನಕ್ಕೆ ಶಿವರಾತ್ರಿ ಪ್ರಯುಕ್ತ ಪೂಜೆ ಮಾಡಲು ನುಗ್ಗಲು ಯತ್ನಿಸಿದಾಗ ಪೊಲೀಸರು 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಕೋಟೆ ಹಾಗೂ ಅದರೊಳಗಿನ ಎಲ್ಲ ಇಮಾರತು ಪುರಾತತ್ವ ಇಲಾಖೆಗೆ ಸಂಬಂಧಿಸಿದರಿಂದ ಅನುಮತಿ ಕಡ್ಡಾಯವಾಗಿ ಪಡೆಯಬೇಕಾಗಿತ್ತು. ಆದರೆ ಹಿಂದೂ ಸಂಘಟನೆಯ ದಿವ್ಯಾ ಹಾಗರಗಿ, ಕಿಶೋರ, ರಾಠೊಡ್, ಸೇರಿದಂತೆ ಇತರರು ಯಾವುದೇ ಅನುಮತಿ ಪಡೆಯದೆ ಪ್ರವೇಶಿಸಲು ಮುಂದಾದಾಗ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆಯಲ್ಲಿ ಪೊಲೀಸರು ಹಾಗೂ ಹಿಂದೂ ಸಂಘಟನೆಗಳ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ. ಏಕಾಎಕಿಯಾಗಿ ಕೋಟೆ ದ್ವಾರದಲ್ಲಿ ಸಂಘಟನೆ ಮುಖಂಡರು ಧರಣಿಗೆ ಮುಂದಾಗಿದ್ದಾರೆ. ಈ ವೇಳೆ ಶಶಿಕುಮಾರ ಶೆಟ್ಟಿ, ಪ್ರಶಾಂತ್ ಜಾಧವ್, ಪೂಜಾರಿ ಸೇರಿದಂತೆ 30 ಜನರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಎಸಿಪಿ ಶರಣಬಸಪ್ಪ ಸುಬೇದಾರ, ಶಿವನಗೌಡ ಪಾಟೀಲ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. 

‘ಟ್ರಂಪ್ ನಿರ್ಬಂಧ ತೆಗೆದುಹಾಕಿದರೆ ಪರಮಾಣು ಒಪ್ಪಂದದಲ್ಲಿ ರಾಜಿ’ 

ಟೆಹ್ರಾನ್‌:ಮಿಲಿಟರಿ ಬೆದರಿಕೆಗಳು ಮತ್ತು ಪ್ರಾದೇಶಿಕ ಉದ್ವಿಗ್ನತೆಯ ವೇಳೆಯಲ್ಲಿ, ಅಮೆರಿಕವು ನಿರ್ಬಂಧಗಳನ್ನು ತೆಗೆದುಹಾಕಲು ಸಿದ್ಧವಾದರೆ ತನ್ನ ಪರಮಾಣು ಕಾರ್ಯಕ್ರಮದಲ್ಲಿ ರಾಜಿ ಮಾಡಿಕೊಳ್ಳಲು ಇರಾನ್ ಸಿದ್ಧವಾಗಿದೆ ಎಂದು ವರದಿಯಾಗಿದೆ.  

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಇರಾನ್‌ನ ಉಪ ವಿದೇಶಾಂಗ ಸಚಿವ ಮಜಿದ್ ತಖ್ತ್‌-ರಾವಂಚಿ, “ಒಪ್ಪಂದ ಮಾಡಿಕೊಳ್ಳಲು ಬಯಸುತ್ತೇವೆ ಎಂಬುದನ್ನು ಸಾಬೀತುಪಡಿಸುವುದು ಅಮೆರಿಕದ ಅಂಗಳದಲ್ಲಿದೆ” ಎಂದು ಹೇಳಿದ್ದಾರೆ.  

“ಅವರು ಪ್ರಾಮಾಣಿಕರಾಗಿದ್ದರೆ, ನಾವು ಒಪ್ಪಂದದ ಹಾದಿಯಲ್ಲಿ ಸಾಗುತ್ತೇವೆ ಎಂದು ನನಗೆ ಖಚಿತವಾಗಿದೆ. ನಿರ್ಬಂಧಗಳ ಪರಿಹಾರವೂ ಮೇಜಿನ ಮೇಲಿದ್ದರೆ ನಮ್ಮ ಪರಮಾಣು ಕಾರ್ಯಕ್ರಮದ ಮಿತಿಗಳನ್ನು ಚರ್ಚಿಸಲು ಸಿದ್ಧವಾಗಿದ್ದೇವೆ “ ಎಂದು ಸಚಿವ ಮಜಿದ್ ಹೇಳಿದ್ದಾರೆ.  

ದೀರ್ಘಕಾಲದ ಮಾತುಕತೆಯ ಬಳಿಕವೂ ಇರಾನ್ ಪ್ರಗತಿಯನ್ನು ವಿಳಂಬ ಮಾಡುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ವಾದಿಸುತ್ತಿರುವ ವೇಳೆಯ ಇರಾನ್ ಕಡೆಯಿಂದ ಹೇಳಿಕೆ ಬಂದಿದೆ.  

ಶನಿವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಒಪ್ಪಂದಕ್ಕೆ ಆದ್ಯತೆ ನೀಡಿದ್ದಾರೆ ಆದರೆ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಿದ್ದರು.