ವಿಶ್ವಶಾಂತಿಗಾಗಿ ಅತಿ ರುದ್ರ ಕಾರ್ಯಕ್ರಮ
Ati Rudra program for world peace
ಲೋಕದರ್ಶನ ವರದಿ
ಬೆಳಗಾವಿ 04: ನಗರದ ಗುರುಪ್ರಸಾದ ಕಾಲೋನಿಯ ದತ್ತ ಮಂದಿರದಲ್ಲಿ ಇತ್ತೀಚೆಗೆ ಆರು ದಿನಗಳ ಕಾಲ ಅತಿ ರುದ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎರಡು ದಶಕಗಳ ನಂತರ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಎಪ್ಪತ್ತಕ್ಕೂ ಹೆಚ್ಚು ರುದ್ರ ಪಾಠಕರು ಪಾಲ್ಗೊಂಡಿದ್ದರು. ಪ್ರತಿದಿ ಐದು ಗಂಟೆಗಳ ಕಾಲ ರುದ್ರ ಪಠಣವನ್ನು ಮಾಡಿದರು.
ಚಂದ್ರಶೇಖರ ಜೋಶಿ ಹಾಗೂ ಬೋಂದ್ರೆ ಗುರುಗಳು ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೋಮ ಹವನ ರುದ್ರ ಸ್ವಾಹಾಕಾರ ಕಾರ್ಯಕ್ರಮಗಳು ನೆರವೇರಿದವು . ಸಾಗರ ಕೆರೂರ, ದರ್ಶನ ಕುಲಕರ್ಣಿ, ವಿನಾಯಕ ಒಡೆಯರ. ಸಂತೋಷಾಚಾರ್ಯ ಜೋಶಿ , ವಿನಾಯಕ ಮುತಾಲಿಕ ದೇಸಾಯಿ , ಯೋಗೇಶ್, ಗಣೇಶ್ ಫಡಕೆ, ಸಂಜೀವ ಕುಲಕರ್ಣಿ, ಚಿದಂಬರ ಮುನವಳ್ಳಿ , ರಮೇಶ ದೀಕ್ಷಿತ್, ಶಾರ್ದೂಲ ಗುರೂಜಿ , ಭಾವು ಜೋಶಿ , ಅರ್ಚಕರಾದ ಮಹೇಶ್ ಹಿರೇಹಳ್ಳಿ ,. ಉದ್ಯೋಗಪತಿ ರವಿ ಕಾಟವಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿಯ ವಿಪ್ರವೃಂದದವರೇ ಒಬ್ಬರಿಗೊಬ್ಬರ ಸಹಕಾರದಿಂದ ಈ ಅನುಷ್ಠಾನ ಮಾಡಿದ್ದು ವಿಶೇಷವಾಗಿತ್ತು. ಸಮಸ್ತ ಭಕ್ತ ಜನರ ದುಃಖಗಳು ದೂರಾಗಿ ನೆಮ್ಮದಿ ಸಿಗಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 