ಮೂಡಲಗಿ

ಸಂಘ ಸಂಸ್ಥೆ, ದಾನಿಗಳ ಸಹಾಯ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕ: ಬಿಇಒ ಅಜೀತ ಮನ್ನಿಕೇರಿ

ಸಂಘ ಸಂಸ್ಥೆ, ದಾನಿಗಳ ಸಹಾಯ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕ: ಬಿಇಒ ಅಜೀತ ಮನ್ನಿಕೇರಿ

ಲೋಕದರ್ಶನ ವರದಿ

ಮೂಡಲಗಿ 23: ನೆರೆಯ ಪ್ರವಾಹದಿಂದಾಗಿ ವಲಯದ ಶಾಲೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಸಂಘ ಸಂಸ್ಥೆಗಳು ಧಾನಿಗಳ ಸಹಾಯ ಸಹಕಾರದಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುತ್ತಿದೆ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಹೇಳಿದರು.

  ಅವರು ಸಮೀಪದ ಕಲಾರಕೊಪ್ಪ, ಕಲಾರಕೊಪ್ಪ ಕ್ರಾಸ್, ಉದಗಟ್ಟಿಯ ನಾಗಲಿಂಗನಗರದ ಶಾಲೆಗಳಿಗೆ ಗೋಕಾಕ ಹಾಗೂ ಮೈಸೂರಿನ ನೇಮಿನಾಥ ಜೈನ ಶ್ವೇತಾಂಬರ ಸಂಘ, ಜೋಯಲರ್ಸ ಸಂಘದಿಂದ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಿಸಿ ಮಾತನಾಡಿದರು. ನೆರೆಯ ಸಂತ್ರಸ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರ ಪರಸ್ಪರ ಸಹಾಯ ಸಹಕಾರ ಅವಶ್ಯಕವಾಗಿದೆ. ವಲಯ ವ್ಯಾಪ್ತಿಯಲ್ಲಿ ಪ್ರವಾಹ ಪೀಡಿತ ಶಾಲಾ ಮಕ್ಕಳಿಗೆ ನೇರವಿನ ಹಸ್ತದ ಜೊತೆಗೆ ಧೈರ್ಯ ಹೇಳುವ ಕೆಲಸಮಾಡುತ್ತಿರುವ ಸಹಕಾರ ಸಂಘ ಸಂಸ್ಥೆಗಳು ದಾನಿಗಳ ಸೇವಾಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಂಘದ ಅದ್ಯಕ್ಷ ಇಂದ್ರಮಲ್ಲಜಿ ಓಸವಾಲ, ಉಪಾಧ್ಯಕ್ಷ ಓಂಕಾರಮಲ್ಲಜಿ ರಾಠೋಡ, ಸದಸ್ಯರಾದ ಜಿತೇಂದ್ರ ಪೋರವಾಲ, ಮಹೇಂದ್ರ ಪೋರವಾಲ, ಎಸ್ಡಿಎಮ್ಸಿ ಅಧ್ಯಕ್ಷ ಸಿದ್ದಪ್ಪ ದಾಸಪ್ಪನವರ, ಮಾಜಿ ತಾಪಂ ಸದಸ್ಯ ಭೀಮಪ್ಪ ಗೌಡಪ್ಪನವರ, ಗ್ರಾಪಂ ಸದಸ್ಯರಾದ ಅಜರ್ುನ ಸನದಿ, ರಾಯಪ್ಪ ಗೌಡಪ್ಪನವರ, ಸಿದ್ದಪ್ಪ ಗೌಡಪ್ಪನವರ,  ಸಿ.ಆರ್.ಪಿಗಳಾದ ಡಿ.ಎಮ್ ಬೋಳೆತ್ತಿನ, ಕೆ.ಆರ್ ಅಜ್ಜಪ್ಪನವರ, ಪ್ರಧಾನಗುರುಗಳಾದ ಬಿ.ಬಿ ಪಡಿಮಾಯಿ, ಬಿ.ಜಿ ಮಂಗಿ, ಎಸ್ ಬಿ ಚೌದರಿ, ವಿ.ವಾಯ್ ಶಿರೋಶಿ, ಯಂಕಪ್ಪ ಕೊಪ್ಪದ, ಈರಪ್ಪ ಹಿಪ್ಪರಗಿ, ನಾಗಪ್ಪ ಹಿಪ್ಪರಿಗಿ, ಬಸವಂತಪ್ಪ ಹಿಪ್ಪರಗಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ