ಅಪಾರ ಹಣದೊಂದಿಗೆ ದೇಶದಿಂದ ಪಲಾಯನ ಆರೋಪ ತಿರಸ್ಕರಿಸಿದ ಅಶ್ರಫ್ ಘನಿ
ಅಬುದಾಬಿ, ಆಗಸ್ಟ್ 19: ನಾಲ್ಕು ಕಾರುಗಳು ಹಾಗೂ ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಕಾಬೂಲ್ ನಿಂದ ಪಲಾಯನ ಮಾಡಿದ್ದಾರೆ ಎಂಬ ಆರೋಪ ಸೇರಿದಂತೆ ಹಲವು ಅಂಶಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಈ ಆರೋಪಗಳು ಆಧಾರ ರಹಿತ ದೇಶದಲ್ಲಿ ರಕ್ತಪಾತ ತಪ್ಪಿಸಲು ದೇಶ ತೊರೆಯುವುದು ಅನಿವಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಕಾಬೂಲ್ ನಿಂದ ತೆರಳುವಾಗ ಶೋ ಬದಲಾಯಿಸಲು ಸಹ ಅವಕಾಶ ಲಭಿಸಲಿಲ್ಲ ಹಾಗಾಗಿ ಅಧ್ಯಕ್ಷೀಯ ಅರಮನೆಯಲ್ಲಿ ಧರಿಸಿದ್ದ ಪಾದರಕ್ಷೆಯಲ್ಲೇ ದೇಶ ಬಿಡಬೇಕಾಯಿತು ಎಂದು ಘನಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.
"ಯುಎಇ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯ ಅಶ್ರಫ್ ಘನಿ ಹಾಗೂ ಅವರ ಕುಟುಂಬ ಸದಸ್ಯರನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಿದೆ. ಅಶ್ರಫ್ ಘನಿ ಎಲ್ಲಿದ್ದಾರೆ ಎಂಬುದು ಖಚಿತವಾಗಿ ತಿಳಿಯದ ಕಾರಣ ಓಮನ್, ತಜಕಿಸ್ತಾನ, ಉಜ್ಬೇಕಿಸ್ತಾನ್ ಅಥವಾ ಲೆಬನಾನ್ ಗೆ ಪಲಾಯನ ಮಾಡಿರಬಹುದು ಎಂದು ಮಾಧ್ಯಮಗಳು ವರದಿಮಾಡಿದ್ದವು.
"ನಿಮ್ಮ ಅಧ್ಯಕ್ಷರು ಸ್ವಂತ ಲಾಭಕ್ಕಾಗಿ, ಜೀವ ಉಳಿಸಿಕೊಳ್ಳಲು ಅಫ್ಘನ್ ಜನರನ್ನು ಮಾರಿ ಓಡಿಹೋಗಿದ್ದಾರೆ ಎಂದು ಹೇಳುವವರನ್ನು ನಂಬಬೇಡಿ " ಈ ಆರೋಪಗಳು ಆಧಾರರಹಿತವಾಗಿವೆ ...ನಾನು ಈ ಆರೋಪಗಳನ್ನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಘನಿ ಹೇಳಿದ್ದಾರೆ.
"ತಮ್ಮನ್ನು ಅಫ್ಘಾನಿಸ್ತಾನದಿಂದ ಹೊರಹಾಕಲಾಯಿತು, ಶೋ ಧರಿಸಲು ಅವಕಾಶ ನೀಡದ ಕಾರಣ ಹಾಕಿಕೊಂಡಿದ್ದ ಚಪ್ಪಲಿಯಲ್ಲಿಯೇ ಅಧ್ಯಕ್ಷೀಯ ಅರಮನೆ ತೊರೆಯಬೇಕಾಯಿತು ಅವರು ಹೇಳಿಕೊಂಡಿದ್ದಾರೆ.
ತಾಲಿಬಾನಿಗಳು ಕಾಬೂಲ್ ಪ್ರವೇಶಿಸಿ ವಿಜಯ ಘೋಷಿಸಿಕೊಂಡ ನಂತರ ಭಾನುವಾರ ಕಾಬೂಲ್ ತೊರೆದ ಘನಿ ಅವರನ್ನು 'ಮಾನವೀಯ ನೆಲೆಗಟ್ಟಿನಲ್ಲಿ' ಆಶ್ರಯ ಕಲ್ಪಿಸಲಾಗಿದೆ ಎಂದು ಯುಎಇ ಹೇಳಿದೆ.