ಅಂತರರಾಷ್ಟ್ರೀಯ

ಹಣ ತುಂಬಿದ್ದ ಕಾರುಗಳೊಂದಿಗೆ ಕಾಬೂಲ್‌ನಿಂದ ಅಶ್ರಫ್ ಘನಿ ಪಲಾಯನ!

ಹಣ ತುಂಬಿದ್ದ ಕಾರುಗಳೊಂದಿಗೆ ಕಾಬೂಲ್‌ನಿಂದ ಅಶ್ರಫ್ ಘನಿ ಪಲಾಯನ!

  ಮಾಸ್ಕೋ, ಆಗಸ್ಟ್ 16 : ತಾಲಿಬಾನ್ ಸಂಘಟನೆಯು ದೇಶದ ಮೇಲೆ ಹಿಡಿತ ಸಾಧಿಸಿದ ಬಳಿಕ ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಶ್ರಫ್ ಘನಿ ಅಫಘಾನಿಸ್ತಾನದಿಂದ ಪಲಾಯನ ಮಾಡಿದ್ದಾರೆ.

  ಘನಿಯವರು ಪಲಾಯನ ಮಾಡಿದ ಸಂದರ್ಭ ಹೇಗಿತ್ತು ಎಂಬುದರ ಕುರಿತು ರಷ್ಯಾ ರಾಯಭಾರ ಕಚೇರಿ ಹೇಳಿಕೆ ನೀಡಿದೆ. 

  ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ, ನಗದು ತುಂಬಿದ ಬೆಂಗಾವಲು ಕಾರುಗಳೊಂದಿಗೆ ಕಾಬೂಲ್ ನಿಂದ ಪಲಾಯನ ಮಾಡಿದ್ದಾರೆ.  ವಿಮಾನ ನಿಲ್ದಾಣದಲ್ಲಿಯೇ ಒಂದಿಷ್ಟು ಹಣವನ್ನು ಬಿಟ್ಟು ಹೋಗಿದ್ದಾರೆ ಎಂದು ರಷ್ಯಾದ ರಾಯಭಾರ ಕಚೇರಿ ಸೋಮವಾರ ಹೇಳಿದೆ.

  ನಾಲ್ಕು ಕಾರುಗಳು ಹಣದಿಂದ ತುಂಬಿದ್ದವು, ಎಲ್ಲವನ್ನೂ ಹೆಲಿಕಾಪ್ಟರ್‌ಗೆ ಹಾಕಲು ಪ್ರಯತ್ನಿಸಿದರು, ಆದರೆ ಎಲ್ಲವೂ ಸರಿಹೋಗಲಿಲ್ಲ. ಒಂದಿಷ್ಟು ಹಣವನ್ನು ರನ್ವೇಯಲ್ಲಿ ಬಿಡಲಾಗಿದೆ, ”ಎಂದು ತಿಳಿದುಬಂದಿದೆ.

ಸುದ್ದಿ ಓದಿ