ಅಂತರರಾಷ್ಟ್ರೀಯ

ಅಫ್ಘನ್‌ ನಿಂದ ಸೇನೆ ವಾಪಸ್ಸಾತಿ, ನಮ್ಮ ಕ್ರಮ ಸರಿಯಾಗಿದೆ; ಜೋ ಬೈಡನ್‌

ಅಫ್ಘನ್‌ ನಿಂದ   ಸೇನೆ ವಾಪಸ್ಸಾತಿ,   ನಮ್ಮ ಕ್ರಮ ಸರಿಯಾಗಿದೆ; ಜೋ ಬೈಡನ್‌

ವಾಷಿಂಗ್ಟನ್‌,  ಆಗಸ್ಟ್‌  17: ಅಫ್ಘಾನಿಸ್ತಾನದಿಂದ      ಸೇನಾ  ಪಡೆಗಳನ್ನು  ಹಿಂಪಡೆದುಕೊಂಡ ನಂತರ ..    ಅಲ್ಲಿ   ತಾಲಿಬಾನಿಗಳು  ನಡೆಸುತ್ತಿರುವ     ಆಟಾಟೋಪಗಳ    ಹಿನ್ನಲೆಯಲ್ಲಿ  ಅಮೆರಿಕಾ ಅಧ್ಯಕ್ಷ   ಜೋ ಬೈಡನ್‌   ವಿರುದ್ದ   ಅಂತರಾಷ್ಟ್ರೀಯ   ಸಮುದಾಯದಿಂದ  ತೀವ್ರ  ರೀತಿಯ   ಟೀಕೆಗಳು   ವ್ಯಕ್ತವಾಗುತ್ತಿವೆ.    ಅಮೆರಿಕಾ- ನ್ಯಾಟೋ  ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳುವ  ಮೂಲಕ   ತಾಲಿಬಾನಿಗಳಿಗೆ   ದೇಶವನ್ನು  ಹಸ್ತಾಂತರಿಸಿವೆ     ಎಂದು   ಅಫ್ಘನ್‌    ಜನರು  ಸಹ   ಬೈಡನ್‌   ವಿರುದ್ದ  ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ.   ಈ  ಹಿನ್ನಲೆಯಲ್ಲಿ  ಜೋ ಬೈಡನ್‌  ಮಾಧ್ಯಮಗಳಿಗೆ  ಸ್ಪಂದಿಸಿದ್ದಾರೆ.

ಈ ಸಂಬಂಧ    ಜೋ ಬೈಡನ್‌   ದೇಶವನ್ನು  ಉದ್ದೇಶಿಸಿ ಮಾತನಾಡಿದರು.   ಅಫ್ಘಾನಿಸ್ತಾನದಿಂದ ಅಮೆರಿಕಾ  ಪಡೆಗಳನ್ನು ಹಿಂತೆಗೆದುಕೊಳ್ಳಲು  ನಾವು ಬದ್ಧರಾಗಿದ್ದೇವೆ.   ಎರಡು ದಶಕಗಳ ನಂತರ    ಸೂಕ್ತ  ನಿರ್ಧಾರ ತೆಗೆದುಕೊಂಡಿದ್ದೇವೆ. ಈ ನಿರ್ಧಾರಕ್ಕೆ ನಾವು ವಿಷಾದಿಸುವುದಿಲ್ಲ. ಅಮೆರಿಕಾದ ಮುಂದೆ ಎರಡು ಮಾರ್ಗಗಳಿದ್ದವು.  ಒಂದು ಅಮೆರಿಕ ಸೇನೆಯನ್ನು  ಹಿಂತೆಗೆದುಕೊಳ್ಳುವುದು.  ಎರಡನೆಯದು .. ಮೂರನೇ ದಶಕದಲ್ಲಿ ಹೆಚ್ಚಿನ  ಸೇನೆಯನ್ನು ರವಾನಿಸಿ, ನಿಯೋಜಿಸಿ ಮುಂದುವರಿಯುವುದು "ಎರಡನೇ ಮಾರ್ಗ   ಅನುಸರಿಸದಿರುವ   ನಮ್ಮ ನಿರ್ಧಾರ  ನೂರು  ಪಟ್ಟು ಸರಿ ಎಂದು ನಾನು ಭಾವಿಸುತ್ತೇನೆ" ಎಂದು ಬೈಡೆನ್ ಹೇಳಿದ್ದಾರೆ.

ರಾಷ್ಟ್ರ  ನಿರ್ಮಾಣ  ನಮ್ಮ ಜವಾಬ್ದಾರಿಯಲ್ಲ

ಅಫ್ಘಾನಿಸ್ತಾನದಲ್ಲಿ     ದೇಶ  ನಿರ್ಮಾಣ    ಅಮೆರಿಕಾದ  ಜವಾಬ್ದಾರಿಯಲ್ಲ, ಆದರೆ    ಭಯೋತ್ಪಾದಕರನ್ನು ತಡೆಯುವ ಗುರಿ  ಅಮೆರಿಕಾ  ಹೊಂದಿದೆ ಎಂದು ಬೈಡೆನ್ ಸ್ಪಷ್ಟಪಡಿಸಿದರು. ನಾವು 20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಲ್ ಖೈದಾವನ್ನು ಕೊನೆಗೊಳಿಸಿದೆವು.  ಬಿನ್‌ ಲಾಡೆನ್  ಹಿಡಿಯಲು   ಹಿಂದೆ ಸರಿಯಲಿಲ್ಲ. ಎರಡು ದಶಕಗಳಿಂದ ಅಫ್ಘಾನ್ ಸೇನೆಗೆ  ತರಬೇತಿ  ಕಲ್ಪಿಸಿ, ಸರ್ಕಾರಕ್ಕೆ ಮನೋಸ್ಥೈರ್ಯ   ನೀಡಿದ್ದೇವೆ.  ಆದರೆ, ಅವರು ಹೋರಾಟದ ಶಕ್ತಿ ಪ್ರದರ್ಶಿಸಲು  ಸಾಧ್ಯವಾಗಲಿಲ್ಲ.  ಅಲ್ಲಿನ ಸರ್ಕಾರ ನಿರೀಕ್ಷೆಗಿಂತ ವೇಗವಾಗಿ ಪತನಗೊಂಡಿದೆ.  ಪ್ರಸ್ತುತ ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು  ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಗತ್ಯವಿದ್ದರೆ ನಾವು ಅಫ್ಘನ್‌  ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ.   ಅಮೆರಿಕಾ  ಸದಾ  ಅಫ್ಘನ್ ಜನರನ್ನು ಬೆಂಬಲಿಸುತ್ತದೆ ಎಂದು  ಬೈಡನ್‌  ಪ್ರತಿಪಾದಿಸಿದ್ದಾರೆ.

ಮತ್ತೊಂದೆಡೆ  ತಾಲಿಬಾನಿಗಳ  ಆಟಾಟೋಪಗಳನ್ನು ನೋಡಿಕೊಂಡು ನಾವು  ಸುಮ್ಮನೆ ಕೂರುವುದಿಲ್ಲ  ಎಂದು  ಎಚ್ಚರಿಸಿರುವ  ಬೈಡನ್‌,   ಅಮೆರಿಕಾ ಸೇನೆಗೆ  ಸಹಾಯ ನೆರವಾಗಿರುವ  ಅಫ್ಘನ್‌  ಜನರಿಗೆ  ಅಗತ್ಯ ಸಮಯದಲ್ಲಿ   ನೆರವು   ಕಲ್ಪಿಸುವುದಾಗಿ  ಸ್ಪಷ್ಟಪಡಿಸಿದರು.

ಸುದ್ದಿ ಓದಿ