ಕ್ರೀಡೆ

ಗಗನ ಸಖಿಗೆ ಅರ್ಜುನ್ ರಣತುಂಗರಿಂದ ಲೈಂಗಿಕ ಕಿರುಕುಳ ಆರೋಪ

ಗಗನ ಸಖಿಗೆ ಅರ್ಜುನ್  ರಣತುಂಗರಿಂದ  ಲೈಂಗಿಕ  ಕಿರುಕುಳ  ಆರೋಪ

ಮುಂಬೈ:  ಶ್ರೀಲಂಕಾ ಕ್ರಿಕೆಟ್  ದಂತ ಕತೆ  ಅರ್ಜುನ್  ರಣತುಂಗ  ಭಾರತಕ್ಕೆ  ಬಂದಿದ್ದಾಗ  ತನಗೆ  ಲೈಂಗಿಕ  ಕಿರುಕುಳ  ಕೊಟ್ಟಿದ್ದರು  ಅಂತ   ಇಂಡಿಯನ್  ಏರ್​ಲೈನ್ಸ್ ನ  ಗಗನಸಖಿಯೊಬ್ಬಳು  ಗಂಭೀರ ಆರೋಪ ಮಾಡಿದ್ದಾಳೆ.  

1996ರಲ್ಲಿ ಶ್ರೀಲಂಕಾಕ್ಕೆ  ಚೊಚ್ಚಲ ವಿಶ್ವಕಪ್  ತಂದುಕೊಟ್ಟಿದ್ದು   ಅಜುರ್ನ್  ರಣತುಂಗ .  ಚಾಣಕ್ಷ  ನಾಯಕತ್ವ,  ನೇರ ಮಾತು , ಅದ್ಬುತ  ಆಡಳಿತಗಾರನಾಗಿ  ಹೆಸರು ಮಾಡಿದವರು.  ಅನ್ಯಾಯ ಕಂಡಾಗಲೆಲ್ಲ  ಸಿಡಿದೇಳುತ್ತಿದ್ದ  ಅರ್ಜುನ್  ರಣತುಂಗ  ಮೇಲೆಯೇ  ಈಗ  ಇಂಡಿಯನ್  ಏರ್​ಲೈನ್ಸ್ ನ  ಗಗನಸಖಿಯೊಬ್ಬಳು  ಲೈಂಗಿಕ  ಆರೋಪ ಮಾಡಿದ್ದಾಳೆ.

ಗಗನ ಸಖಿ ಫೇಸ್​ಬುಕ್​ನಲ್ಲಿ   ನನ್ನ ಸಹೋದ್ಯೋಗಿ  ಆಟೋಗ್ರಾಫ್​ಗಾಗಿ  ಮುಂಬೈನ  ಜುಹು ಸೆಂಚೂರ ಹೋಟೇಲ್​ಗೆ ಹೋದಾಗ  ಅರ್ಜುನ ರಣತುಂಗ  ನನ್ನ  ಸೊಂಟ ಮುಟ್ಟಿ  ಅಸಭ್ಯವಾಗಿ ವರ್ತಿಸಿದ್ರು. ನಾನು  ತಕ್ಷಣ  ರಿಸೆಪ್ಶನ್  ಬಳಿ ಹೋಗಿ  ದೂರು  ಕೊಟ್ಟೆ  ಆದರೆ  ರಿಸೆಪ್ಶನಿಸ್ಟ್  ಇದು  ನಿಮ್ಮ  ವೈಯಕ್ತಿಕ ವಿಷಯ ಎಂದು  ಹೇಳಿ   ಸಹಾಯ ಮಾಡಲಿಲ್ಲ  ಎಂದು  ದೂರಿದ್ದಾರೆ.    

ಸುದ್ದಿ ಓದಿ