ಅಂತರರಾಷ್ಟ್ರೀಯ

28 ವರ್ಷಗಳ ನಂತರ ‘ಕೊಪಾ ಅಮೆರಿಕ’ ಪ್ರಶಸ್ತಿ ಮುಡಿಗೇರಿಸಿಕೊಂಡ ಅರ್ಜೈಂಟಿನಾ

28 ವರ್ಷಗಳ ನಂತರ ‘ಕೊಪಾ ಅಮೆರಿಕ’ ಪ್ರಶಸ್ತಿ ಮುಡಿಗೇರಿಸಿಕೊಂಡ  ಅರ್ಜೈಂಟಿನಾ

ರಿಯೋ ಡಿ ಜನೈರೋ, ಜುಲೈ 11: ಇಲ್ಲಿನ ಮರ್ಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅರ್ಜೈಂಟಿನಾ ತಂಡ ಬ್ರೆಜಿಲ್‍ ತಂಡವನ್ನು 1-0 ಗೋಲಿನಿಂದ ಮಣಿಸುವುದರ ಮೂಲಕ 1993ರ ನಂತರ ‘ಕೊಪಾ ಅಮೆರಿಕ’ ಫುಟ್ ಬಾಲ್‍ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 

 22ನೇ ನಿಮಿಷದಲ್ಲಿ ಅರ್ಜೈಂಟಿನಾದ ಏಂಜಲ್‍ ಡಿ ಮಾರಿಯಾ ಏಕಮಾತ್ರ ಗೋಲು ಹೊಡೆದರು. ಅರ್ಜೈಂಟಿನಾಗೆ ಇದು 15 ಕೊಪಾ ಅಮೆರಿಕ ಪ್ರಶಸ್ತಿಯಾಗಿದೆ. ಅಲ್ಲದೆ, ಅರ್ಜೈಂಟಿನಾ ತಂಡದ ನಾಯಕರಾದ ನಂತರ ಲಿಯೊನೆಲ್ ಮೆಸ್ಸಿಗೆ ಮೊದಲ ಪ್ರಮುಖ ಟೂರ್ನಿಯಾಗಿತ್ತು.

ಇದೇ ಕ್ರೀಡಾಂಗಣದಲ್ಲಿ 2014ರಲ್ಲಿ ನಡೆದ ವಿಶ್ವಕಪ್‍ ಫೈನಲ್‍ ನಲ್ಲಿ ಮೆಸ್ಸಿ ನೇತೃತ್ವದ ಅರ್ಜೈಂಟಿನಾ ತಂಡ, ಜರ್ಮನಿ ವಿರುದ್ಧ ಸೋಲು ಅನುಭವಿಸಿತ್ತು. 

ಟೂರ್ನಿಯಲ್ಲಿ ಅರ್ಜೈಂಟಿನಾ ಮತ್ತು ಬ್ರೆಜಿಲ್‍ ತಮ್ಮ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿವೆ. 

ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಕೇವಲ 7,000 ಆಮಂತ್ರಿತ ಅತಿಥಿಗಳಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿತ್ತು.

ಸುದ್ದಿ ಓದಿ