ಓಷಧ ಸಂಬಂಧಿತ ನೀತಿಗಳನ್ನು ವಿರೋಧಿಸಿ ವ್ಯಾಪಾರಿಗಳ ಬೇಡಿಕೆಗಳ ಈಡೇರಿಕೆಗೆ ತಹಶೀಲ್ದಾರ ಅವರ ಮೂಲಕ ಸರ್ಕಾರಕ್ಕೆ ಮನವಿ
Appeal to the government through the Tahsildar to fulfill the demands of traders opposing drug-relat
ಕೊಲ್ಹಾರ 20 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೆಲವು ಓಷಧ ಸಂಬಂಧಿತ ನೀತಿಗಳನ್ನು ವಿರೋಧಿಸಿ ಹಾಗೂ ವ್ಯಾಪಾರಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೊಲ್ಹಾರ ತಾಲೂಕು ಓಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಖಿಲ ಭಾರತ ಓಷಧ ವಿತರಕರ ಸಂಘ ಕರೆ ನೀಡಿದ ಹಿನ್ನೆಲೆಯಲ್ಲಿ ಮೇ 20 ರಂದು ದೇಶವ್ಯಾಪಿ ಒಂದು ದಿನದ ಓಷಧ ವ್ಯಾಪಾರ ಬಂದ್ಗೆ ಬೆಂಬಲ ಸೂಚಿಸಿರುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದರು.ಮನವಿಯಲ್ಲಿ ಆನ್ಲೈನ್ ಹಾಗೂ ಅನಧಿಕೃತ ಇ-ಫಾರ್ಮಸಿ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಓಷಧ ಮಾರಾಟದಲ್ಲಿ ಅನ್ಯಾಯಕರ ಬೆಲೆ ನೀತಿ ತಡೆದು ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ, ಓಷಧ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕೆಂದು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಕೊಲ್ಹಾರ ತಾಲೂಕು ಓಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಅರುಣ ಓರಸಂಗ, ಉಪಾಧ್ಯಕ್ಷರಾದ ಇಜಾಜ್ ಜಮುನಾ, ಕಾರ್ಯದರ್ಶಿ ಪ್ರಶಾಂತ ಸಂಗಳದ, ಡಾ.ಬಸವರಾಜ ಮೇಲಗಿರಿ, ಈರಣ್ಣ ಗೋಕಾವಿ, ಸಿದ್ದಲಿಂಗ ಹೂಗಾರ, ಬಾಳಪ್ಪ ಗವರೋಜಿ, ಹನಮಂತ ಗವರೋಜಿ, ನಾಸೀರಸಾಬ ಜಮುನಾ, ಮಹೆಬೂಬ ಕಾಕಂಡಕಿ, ಆಕಾಶ್ ಲಿಂಬಿಕಾಯಿ, ಅನಿಲ ಅಂಬಲಿ, ಐತಿಸ್ಯಾಮ ಕಂಕರಪೀರ, ಅಕ್ಬರಬಾಶಾ ನಾಗರದಿನ್ನಿ, ಮಲ್ಲು ಮಠ, ಕಿರಣ ಮಠ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 