ಮನೆ ಕಟ್ಟಡ ಕಾರ್ಯ ತಡೆಹಿಡಿಯಲು ಒತ್ತಾಯಿಸಿ ಮನವಿ
ಮೂಡಲಗಿ 25: ತಾಲೂಕಿನ ಪಿ ಜಿ ಹುಣಶ್ಯಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಜನರು ವಾಸಿಸುವಂತಹ ಜನತಾ ಪ್ಲಾಟ್, ಆಶ್ರಯ ಮನೆಗಳ ಹತ್ತಿರವಿರುವ ಸರಕಾರದ ಖಾಲಿ ಜಾಗೆಯೊಂದನ್ನು ಅದೆ ಗ್ರಾಮದ ಮಲ್ಲಪ ನೇಸರಗಿ ಎಂಬುವರು ಅತಿಕ್ರಮಣ ಮಾಡಿ ಮನೆ ಕಟ್ಟಡ ಕಾರ್ಯ ಮಾಡುತ್ತಿದ್ದಾರೆ ಅದನ್ನು ತಡೆಹಿಡಿಯಬೇಕು ಹಾಗೂ ಸರಕಾರದ ಜಾಗೆಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವ ಈ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಲಕ್ಷ್ಮಣ ಮೆಳ್ಳಿಗೇರಿ ನೇತೃತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮಲೀಕಜಾನ ತಲವಾರ, ಗೋಕಾಕ ತಾಲೂಕಾ ಅಧ್ಯಕ್ಷ ಅಜೀಜ ಮೊಕಾಶಿ, ಹಮೀದ ಗೂಡವಾಲೆ, ರಫೀಕ ನಂದಗಡ, ಶೆಬ್ಬೀರ ಪೈಲವಾನ, ಶ್ರೀಶೈಲ ಗೌರನ್ನವರ, ಗೋಪಾಲ ಮಳಲಿ, ಗಂಗವ್ವ ಅಂಕಲಗಿ, ಮಲ್ಲವ್ವ ಗುಡಿ, ಲಕ್ಕವ್ವ ತಪ್ಸಿ, ರೇಖಾ ಕಲಾಲ, ಮಮ್ತಾಜ ನದಾಫ, ರಾಯಪ್ಪ ನಾವಿ ಇದ್ದರು.