ಧಾರವಾಡ - ಹುಬ್ಬಳ್ಳಿ

ಅಪ್ಪಣವರ ವಿಶ್ವಾಸವೇ ನನ್ನ ದೊಡ್ಡ ಬಂಡವಾಳ: ಸುಭಾಷ್ ಡಂಕ್

ಅಪ್ಪಣವರ ವಿಶ್ವಾಸವೇ ನನ್ನ ದೊಡ್ಡ ಬಂಡವಾಳ: ಸುಭಾಷ್ ಡಂಕ್


ಹುಬ್ಬಳ್ಳಿ 08 : ಸಂಗೊಳ್ಳಿ ರಾಯಣ್ಣ ಸನ್ಮಾನ 2026ಕ್ಕೆ ಭಾಜನರಾದ ಸುಭಾಷ್ ಚಂದ್ರ ಡಂಕ್ ಅವರನ್ನು ಕಾಂಠಾ ಪ್ರಾಂತೀಯ ಓಸ್ವಾಲ್ ಸಾಜನಾ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಸಮಾಜದ ವಿವಿಧ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುಭಾಷ್ ಡಂಕ್ ಅವರ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವವನ್ನು ಗಣ್ಯರು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಠಾ ಪ್ರಾಂತದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕಟಾರಿಯಾ, ಸುಭಾಷ್ ಡಂಕ್ ಅವರು ಸದಾ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇಂತಹ ಸಮರ​‍್ಿತ ವ್ಯಕ್ತಿಗಳ ಸನ್ಮಾನವು ಸಮಾಜದ ಸೇವಾ ಪರಂಪರೆಗೆ ನೀಡುವ ಗೌರವವಾಗಿದೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಭಾಷ್ ಚಂದ್ರ ಡಂಕ್,  ನನಗೆ ದೊರೆತಿರುವ ಯಾವುದೇ ಪ್ರಶಸ್ತಿಗಿಂತ, ನನ್ನವರ ವಿಶ್ವಾಸವೇ ದೊಡ್ಡ ಬಂಡವಾಳ. ನಿಮ್ಮ ಪ್ರೀತಿ ಮತ್ತು ವಿಶ್ವಾಸವೇ ನನ್ನ ಶಕ್ತಿ. ಸಮಾಜ ಸೇವೆಯೇ ನನ್ನ ಸಂಕಲ್ಪ” ಎಂದು ಭಾವುಕರಾಗಿ ಹೇಳಿದರು.

ಸಮಾಜದ ಪ್ರೀತಿ, ವಿಶ್ವಾಸ ಮತ್ತಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ನೀಡುತ್ತದೆ. ಮುಂದೆಯೂ ಸಮಾಜದ ಹಿತಕ್ಕಾಗಿ ಹೆಚ್ಚಿನ ನಿಷ್ಠೆ ಹಾಗೂ ಸಮರೆ​‍್ಣಯಿಂದ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಂಠಾ ಪ್ರಾಂತದ ಅಧ್ಯಕ್ಷ ಶಾಂತಿಲಾಲ್ ಬೋಹರಾ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕಟಾರಿಯಾ ಸೇರಿದಂತೆ ಜೈಂತೀಲಾಲ್ ಕಟಾರಿಯಾ, ಕಾಂತಿಲಾಲ್ ಕಟಾರಿಯಾ, ಕಿಶೋರ್ ಕಟಾರಿಯಾ, ರಾಜೇಶ್ ಬೋಹರಾ, ರಾಜೇಶ್ ಕಟಾರಿಯಾ, ಪ್ರಕಾಶ್ ಆರ್‌. ಕಟಾರಿಯಾ, ನರೇಂದ್ರ ಪಿತಲಿಯಾ, ಮುಕೇಶ್ ಕಟಾರಿಯಾ ಸೇರಿದಂತೆ ಹಲವು ಸಮಾಜ ಬಾಂಧವರು ಉಪಸ್ಥಿತರಿದ್ದರು. 


ಸುದ್ದಿ ಓದಿ